ಬಿಜೆಪಿ ಮಾನ ಕಾಪಾಡಿದ ರಮೇಶ್ ಸಾಹುಕಾರ್! ಸೋಲಿನಲ್ಲೂ ಗೆಲುವು ಕಂಡ ಸತೀಶ್ ಸಾಹುಕಾರ್..

ಬೆಳಗಾವಿ ಉಪಸಮರದಲ್ಲಿ ಮಂಗಲಾ ಅಂಗಡಿಗೆ ಪ್ರಾಯಾಸದ ಗೆಲುವು

 | 
ಬಿಜೆಪಿ ಮಾನ ಕಾಪಾಡಿದ ರಮೇಶ್ ಸಾಹುಕಾರ್! ಸೋಲಿನಲ್ಲೂ ಗೆಲುವು ಕಂಡ ಸತೀಶ್ ಸಾಹುಕಾರ್..

ಸಂಕಷ್ಟದಲ್ಲಿದ್ದರೂ ಸಹ ಕುಟುಂಬದ ಪ್ರತಿಷ್ಠೆಯನ್ನು ಬದಿಗೊತ್ತಿ, ಪಕ್ಷದ ನಿಷ್ಠೆ ತೋರಿಸಿ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿಯೇ ಗೋಕಾಕ್ ಕ್ಷೇತ್ರದಿಂದ ಬಿಜೆಪಿಗೆ ಅತೀ ಹೆಚ್ಚು ಲೀಡ್ ಕೊಟ್ಟು ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿದ್ದು ಸಾಹುಕಾರ್ ರಮೇಶ್ ಜಾರಕಿಹೊಳಿ‌.

ಬಿಜೆಪಿಗೆ ಅತೀ ಹೆಚ್ಚು ಲೀಡ್ ಸಿಕ್ಕಿದ್ದು ಗೋಕಾಕ್ ಕ್ಷೇತ್ರದಲ್ಲಿ.  ದೊಂದೆ ಕ್ಷೇತ್ರದಲ್ಲಿ ಬಿಜೆಪಿಗೆ 29 ಸಾವಿರ ಮತಗಳ ಲೀಡ್ ಬಂದಿದ್ದರಿಂದ ಬಿಜೆಪಿಯ ಗೆಲುವಿಗೆ ಕಾರಣವಾಯಿತು.

ಮಂಗಲಾ ಅಂಗಡಿ ಅವರು 5040 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಕ್ಷೇತ್ರದ ಎಂಟೂ ವಿಧಾಸಭಾ ಕ್ಷೇತ್ರಗಳ ಒಳಾಂಗಣ ರಾಜಕೀಯ ಚಿತ್ರಣವನ್ನು ತೋರಿಸಿದೆ. ಗೋಕಾಕ್ ಮತ್ತು ಬೆಳಗಾವಿ ದಕ್ಷಿಣ ಮತಕ್ಷೇತ್ರಗಳನ್ನು ಹೊರತು ಪಡಿಸಿದ್ರೆ ಬೇರೆ ಯಾವ ಬಿಜೆಪಿ ಶಾಸಕ ಬಿಜೆಪಿಗೆ ಲೀಡ್ ಕೊಡಿಸುವದರಲ್ಲಿ ವಿಫಲವಾಗಿದ್ದು,‌ ಎಲ್ಲರ ನಿರೀಕ್ಷೆ ಮತ್ತು ಲೆಕ್ಕಾಚಾರಗಳು ಬುಡಮೇಲಾಗಿವೆ.

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ಅತ್ಯಲ್ಪ ಮತಗಳಿಂದ ಸೋತರೂ ತಮ್ಮ ವ್ಯೆಯಕ್ತಿಕ ವರ್ಷಸ್ಸು ತೋರಿಸಿದ್ದಾರೆ. ಬೆಳಗಾವಿ ಲೋಕಸಭಾ ಮತಕ್ಷೇತ್ರದ ಫಲಿತಾಂಶ ಗಮನಿಸಿದರೆ ಕ್ಷೇತ್ರದಲ್ಲಿ ಬಿಜೆಪಿ ಅಲೆ ಇತ್ತು ಎನ್ನುವದು ಸ್ಪಷ್ಠವಾಗುತ್ತದೆ.

ಎಂಈಎಸ್ ಅಭ್ಯರ್ಥಿ ಶುಭಂ ಶಿಳಕೆ ಒಂದು ಲಕ್ಷ 16 ಸಾವಿರ ಮತಗಳನ್ನು ಪಡೆದರೂ ಸಹ ಎಂಈಎಸ್ ಉದ್ದೇಶ ಈಡೇರಲಿಲ್ಲ.  ಅರಭಾಂವಿ, ಬೈಲಹೊಂಗಲ, ಸವದತ್ತಿ, ರಾಮದುರ್ಗ , ಬೆಳಗಾವಿ ಉತ್ತರ ವಿಧಾಸಭಾ ಕ್ಷೇತ್ರಗಳಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರು ತಮ್ಮ ವರ್ಚಸ್ಸು ತೋರಿಸುವಲ್ಲಿ ಯಶಸ್ವಿಯಾದರೂ, ಈ ಕ್ಷೇತ್ರಗಳಲ್ಲಿ ಸತೀಶ್ ಅವರ ಆಟ ನಡೆಯುತ್ತದೆ ಎಂದು ಯಾರೂ ಊಹೆ ಮಾಡಿರಲಿಲ್ಲ. ಸತೀಶ್ ಜಾರಕಿಹೊಳಿ ಅವರು ಸೋತು ಗೆದ್ದಿದ್ದಾರೆ.

ಈ ಚುನಾವಣೆಯಲ್ಲಿ ಬಿಜೆಪಿಗೆ ವರದಾನವಾಗಿದ್ದು ಗೋಕಾಕ್ ಕ್ಷೇತ್ರ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ಅವರ ಅಳಿಯ ಅಂಬಿರಾವ್ ಅತ್ಯಂತ ವ್ಯವಸ್ಥಿತವಾಗಿ ಕೆಲಸ ಮಾಡಿದ್ರು. ಬಿಜೆಪಿಯ ಮಾನ ಕಾಪಾಡಿದ್ರು. ಪಕ್ಷದ ನಿಷ್ಠೆ ಇದ್ದರೆ ಏನೆಲ್ಲಾ ಮಾಡಬಹುದು ಅನ್ನೋದನ್ನ ರಮೇಶ್ ಜಾರಕಿಹೊಳಿ‌ ಅವರು ಈ ಚುನಾವಣೆಯಲ್ಲಿ ತೋರಿಸುವ ಮೂಲಕ ರಾಜ್ಯದ ಗಮನ ಸೆಳೆದ್ದಾರೆ.