ಅನ್ಯಧರ್ಮದ ಯುವಕನನ್ನು ಮದುವೆಯಾದ ಯುವತಿಗೆ ಥಳಿತ

ತಲೆ ಬೋಳಿಸಿ ಮೆರವಣಿಗೆ ಮಾಡಿದ ಕಿಡಿಕೇಡಿಗಳು

 | 
Representative Image

ಬಾರಬಂಕಿ: ಅನ್ಯ ಧರ್ಮದ ಯುವಕನನ್ನು ಮದುವೆಯಾದ ಹಿನ್ನೆಲೆ 20 ವರ್ಷದ ಯುವತಿಯ ಮೇಲೆ ಹಲ್ಲೆ ನಡೆಸಿ ನಂತರ ಬಲವಂತದಿಂದ ಆಕೆಯ ತಲೆ ಬೋಳಿಸಿ ಬೀದಿಗಳಲ್ಲಿ ಮೆರವಣಿಗೆ ನಡೆಸಿರುವ ಘಟನೆ ಉತ್ತರಪ್ರದೇಶದ ಬಾರಬಂಕಿಯಲ್ಲಿ ನಡೆದಿದೆ.

ಈ ಸಂಬಂಧ ಎಂಟು ಜನರ ವಿರುದ್ಧ ಫತೇಪುರ್ ಕೊತ್ವಾಲ್ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಮೂರು ಜನರ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಮೌರ್ಯ ತಿಳಿಸಿದ್ದಾರೆ.

ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಮುಸ್ಲಿಂ ಸಮುದಾಯದ ಯುವತಿ ಆಕೆಯ ಅಜ್ಜಿ ಜೊತೆ ವಾಸವಾಗಿದ್ದಳು, ಒಬ್ಬನೇ ವಾಸವಾಗಿದ್ದ 28 ವರ್ಷದ ಹಿಂದೂ ಪುರುಷನ ಜೊತೆ ಸುಮಾರು ದಿನಗಳಿಂದ ಸಂಬಂಧ ಬೆಳಸಿದ್ದ ಯುವತಿ ಸೋಮವಾರ ದೇವಸ್ಥಾನದಲ್ಲಿ ಮದುವೆಯಾಗಿದ್ದಳು.

ಇದನ್ನು ತಿಳಿದ ಯುವತಿಯ ಸಂಬಂಧಿಕರು ಆಕೆಯ ಪತಿ ಕೆಲಸಕ್ಕೆ ತೆರಳಿದ ಸಂದರ್ಭ ಯುವಕನ ಮನೆಗೆ ಬಂದು ಆಕೆಯನ್ನು ಬಲವಂತವಾಗಿ ಎಳೆದೊಯ್ದು ಹೊಡೆದು ಬಡಿದು ತಲೆ ಬೋಳಿಸಿ ಶಿಕ್ಷಿಸಿದ್ದಾರೆ.