ಕೋವಿಡ್, ಔಷಧ ಉಪಕರಣಗಳ ಮೇಲಿನ ಜಿಎಸ್ ಟಿ ರದ್ದು ಮಾಡಿ

ಕೇಂದ್ರ ಸರ್ಕಾರಕ್ಕೆ ಕಾಂಗ್ರಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ಆಗ್ರಹ

 | 
priyanka gandhi vadra

ಬೆಂಗಳೂರು: ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಲಾಗುತ್ತಿರುವ ಸ್ಯಾನಿಟೈಸರ್, ಕೈ ಗವಸು, ಮಾಸ್ಕ್, ಪಿಪಿಇ ಕಿಟ್, ಟೆಸ್ಟಿಂಕ್ ಕಿಟ್ ಸೇರಿದಂತೆ ಜೀವ ರಕ್ಷಕ ಆಕ್ಸಿಜನ್, ಔಷಧಗಳ ಮೇಲಿನ ಜಿಎಸ್ ಟಿಯನ್ನು ರದ್ದುಮಾಡುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಔಷಧ ಉತ್ಪನ್ನಗಳು, ಆಕ್ಷಿಜನ್, ವೆಂಟಿಲೇಟರ್ಸ್, ಲಸಿಕೆ ಮತ್ತು ಔಷಧಗಳ ಮೇಲೆ ಜಿಎಸ್ ಟಿ ವಿಧಿಸುವುದು ಅಮಾನವೀಯ ಕ್ರಮ ಎಂದು ತಿಳಿಸಿದ್ದಾರೆ.

ಇಂದು ಜಿಎಸ್ ಟಿ ಕೌನ್ಸಿಲ್ ಸಭೆ ನಡೆಯಲಿದೆ. ಕೇಂದ್ರ ಸರ್ಕಾರ ಈ ಸಭೆಯಲ್ಲಿ ಎಲ್ಲಾ ಜೀವ ರಕ್ಷಕ ಔಷಧ, ಔಷಧಿಯ ಪಕರಣಗಳ ಮೇಲಿನ ತೆರಿಗೆಯನ್ನು ತೆಗೆದುಹಾಕಬೇಕು ಎಂದು ಪ್ರಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.