ಪ್ರತೀ ಕುಟುಂಬಕ್ಕೆ 2000 ಕೋವಿಡ್ ಪರಿಹಾರ, ಹಾಲಿನ ದರ ಕಡಿತ ತಮಿಳುನಾಡಿನ ಸಿಎಂ ಆದೇಶ

ಚುನಾವಣಾ ಪ್ರಣಾಳಿಕೆಯ ಭರವಸೆ ಈಡೇರಿಸಿದ ಎಂ.ಕೆ ಸ್ಟಾಲಿನ್

 | 

ಚೆನ್ನೈ: ಪ್ರಮಾಣವಚನ ಸ್ವೀಕರಿಸಿದ ಮೊದಲ ದಿನವೇ ತಮಿಳುನಾಡಿದ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ತಮಿಳುನಾಡಿನ ಜನರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದ್ದಾರೆ, ಕೊರೋನಾ ಮಾಹಾಮಾರಿ ಹೆಚ್ಚಾಗುತ್ತಿರುವ ಹಿನ್ನೆಲೆ ಲಾಕ್ ಡೌನ್ ಇದ್ದು, ಇದಕ್ಕೆ ಪರಿಹಾರವಾಗಿ ಎರಡು ಸಾವಿರ ರೂಪಾಯಿ ಹಾಗೂ ಸರ್ಕಾರದ ಹಾಲು ಅವಿನ್ ದರ ಕಡಿತ ಮತ್ತು ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅವಕಾಶ ಮಾಡಿಕೊಡು ಆದೇಶಕ್ಕೆ ಸ್ಟಾಲಿನ್ ಸಹಿ ಮಾಡಿದ್ದಾರೆ.

ಪಡಿತರ ಚೀಟಿ ಹೊಂದಿರುವ ಸುಮಾರು 2,07,67,000 ಜನ ಮೇ ತಿಂಗಳಲ್ಲಿ ಮೊದಲ ಕಂತು ತಲಾ ಎರಡು ಸಾವಿರ ಕೋವಿಡ್ ಸಂಕಷ್ಟ ಪರಿಹಾರ ಪ್ರಯೋಜನ ಪಡೆಯಲಿದ್ದಾರೆ. ಹಾಗೆ, ತಮಿಳುನಾಡಿನ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ವಿಮಾ ಯೋಜನೆಯಡಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ಒದಗಿಸುವ ಯೋಜನೆ ಜಾರಿಗೆ ತರುವುದಾಗಿ ಘೋಷಣೆ ಮಾಡಿದ್ದಾರೆ.

ಸರ್ಕಾರದದ ಅವಿನ್ ಹಾಲಿನ ದರವನ್ನು ಮೂರು ರೂಪಾಯಿ ಇಳಿಕೆ ಮಾಡಲಾಗಿದೆ, ಹಾಗೆ ಮಹಿಳೆಯರು ನಗರದ ಸರ್ಕಾರಿ  ಸಾಮಾನ್ಯ ಶುಲ್ಕ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು ಎಂಬ ಆದೇಶಕ್ಕೆ ಸಹಿ ಹಾಕಿದ್ದು, ಡಿಎಂಕೆ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರೆ.