ಸಹಾಯ ಕೇಳಿದ 10 ನಿಮಿಷದಲ್ಲೇ ರೈನಾಗೆ ನಟ ಸೋನು ಸೂದ್ ನೆರವು

ನೆರವು ನೀಡದ ಸೂದ್ ಗೆ ಕೈ ಮುಗಿದು ಧನ್ಯವಾದ ತಿಳಿಸಿದ ರೈನಾ

 | 
Suresh raina and Sonu sood

ನಟ ಸೋನು ಸೂದ್ ಕೋವಿಡ್ ಮೊದಲ ಅಲೆಯಿಂದಲೂ ಬಡ ರೋಗಿಗಳ ಆರಾಧ್ಯ ದೈವ, ದಿನದ 24 ಗಂಟೆಯೂ ಬಡ ರೋಗಿಗಳ ಸೇವೆಗಾಗಿ ನಿರಂತರವಾಗಿ ಮಿಡಿಯುತ್ತಿರುವ ಹೃದಯ, ಇಷ್ಟು ದಿನ ಬಡ ರೋಗಿಗಳಿಗೆ ಹೆಚ್ಚು ಸಹಾಯ ಮಾಡಿ ಸುದ್ದಿಯಾಗುತ್ತಿದ ಸೋನು ಸೂದ್, ಈಗ ಮಾಜಿ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರಿಗೂ ಸಹಾಯ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಮಾಜಿ ಟೀಂ ಇಂಡಿಯಾ ಕ್ರಿಕೆಟ್ ಆಟಗಾರ ಸುರೇಶ್ ರೈನಾ ಅವರು ಅವರ 65 ವರ್ಷದ ಸಂಬಂಧಿಕರೋರ್ವರು ಶ್ವಾಸಕೋಶ ಸೋಂಕಿನಿಂದ ಆಸ್ಪತ್ರೆ ಸೇರಿದ್ದರು, ಅವರು ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿತ್ತು, ಅವರಿಗೆ ಆಕ್ಸಿಜನ್ ಅವಶ್ಯಕತೆ ಎದುರಾಗಿ, ಆಕ್ಸಿಜನ್ ಗಾಗಿ ಸುರೇಶ್ ರೈನಾ ಮತ್ತವರ ಕುಟುಂಬ ಹಲವಾರು ಕಡೆ ಸುತ್ತಾಡಿದ್ದಾರೆ.

ಕೊನೆಗೆ ಎಲ್ಲಿಯೂ ಆಕ್ಸಿಜನ್ ಸಿಗದ ಕಾರಣ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೂ ಟ್ವೀಟ್ ಮಾಡಿ ಆಕ್ಸಿಜನ್ ಗಾಗಿ ಮನವಿ ಮಾಡಿದ್ದಾರೆ. ಯುಪಿ ಸಿಎಂ ಸಹಾಯ ಮಾಡಿದ್ರೋ ಇಲ್ವೋ ಆದ್ರೆ. ಈ ಟ್ವೀಟ್ ಗಮನಿಸಿದ ನಟ ಸೋನು ಸೂದ್ ತಕ್ಷಣವೇ ರೈನಾ ಅವರ ನೆರವಿಗೆ ಧಾವಿಸಿದ್ದಾರೆ.

10 ನಿಮಿಷದಲ್ಲಿ ಆಕ್ಸಿಜನ್ ತಲುಪಲಿದೆ ಸಹೋದರ ಎಂದು ಟ್ವೀಟ್ ಗೆ ಮಾಡಿದ ಅವರು, ತಮ್ಮ ಫೌಂಡೇಷನ್ ಮೂಲಕ 10 ನಿಮಿಷದಲ್ಲಿ ಆಕ್ಸಿಜನ್ ತಲುಪಿಸಿ ಕೊಟ್ಟ ಮಾತು ಉಳಿಸಿಕೊಳ್ಳುವ ಮೂಲಕ ಸುರೇಶ್ ರೈನಾ ಅವರ ಸಂಬಂಧಿಯ ಪ್ರಾಣ ಉಳಿಸಿದ್ದಾರೆ.

ತಮ್ಮ ಸಂಕಷ್ಟಕ್ಕೆ ಸ್ಪಂದಿಸಿದ ಸೋನ್ ಸೂದ್ ಅವರಿಗೆ ಸೂರೇಶ್ ರೈನಾ ಅವರು ಟ್ವೀಟ್ ಮೂಲಕವೇ ನಿಮ್ಮ ಎಲದಲಾ ಸಹಾಯಕ್ಕೆ ದೊಡ್ಡ ಧನ್ಯವಾದ ಸೋನು ಪಾಜಿ ಎಂದು ನಿಮ್ಮ ಆಶಿರ್ವಾದ ಸದಾ ಇರಲಿ ಎಂದು ಧನ್ಯವಾದ ತಿಳಿಸಿದ್ದಾರೆ.