10 ಮಕ್ಕಳಿಗೆ ಜನ್ಮ ನೀಡಿ ದಾಖಲೆ ನಿರ್ಮಿಸಿದ ಮಹಾತಾಯಿ

 | 
ಗೊಸಿಯಾಮೇ ಥಾಮರ ಸಿಥೋಲ್

ಕೇಪ್ ಟೌನ್: ದಕ್ಷಿಣ ಆಪ್ರಿಕಾದ ಮಹಿಳೆಯೊಬ್ಬರು ಬರೊಬ್ಬರಿ 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಹಿಂದೆ ವಿಶ್ವ ದಾಖಲೆ ನಿರ್ಮಿಸಿದ್ದ ಮಾಲೆಯ ಹಲಿಮಾ ಚಿಸ್ಸೆಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ

ಗೊಸಿಯಾಮೇ ಥಾಮರ ಸಿಥೋಲ್ ಎಂಬ 37 ವರ್ಷ ವಯಸ್ಸಿನ ಮಹಿಳೆಗೆ ಎಂಟು ಮಕ್ಕಳಾಗಲಿವೆ ಎಂದು ತಿಳಿಯಲಾಗಿತ್ತು ಆದರೆ. 10 ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಪ್ರೆಟೋರಿಯಾ ಆಸ್ಪತ್ರೆಯ ಸಿಸೇರಿಯನ್ ವಿಭಾಗದಲ್ಲಿ ಹೆಂಡತಿ 10 ಮಕ್ಕಳಿಗೆ ಜನ್ಮ ನೀಡಿರುವುದು ತುಂಬಾ ಸಂತೋಷವಾಗಿದೆ ಎಂದು ಥಾಮರ ಸಿಥೋಲ್ ಪತಿ ತೆಬೊಹೋ ತ್ಸೊತೆತ್ಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಏಳು ತಿಂಗಳು ಮತ್ತು ಏಳು ದಿನ ಪ್ರೆಗ್ನೆಂಟ್ ಆಗಿದ್ದ ನನ್ನ ಹೆಂಡತಿ 7 ಗಂಡು ಮತ್ತು ಮೂರು ಹೆಣ್ಣು ಮಕ್ಕಳಾಗಿ ಜನ್ಮ ನೀಡಿದ್ದಾಳೆ ಎಂದು ತೆಬೊಹೋ ತ್ಸೊತೆತ್ಸಿ ಹೇಳಿದ್ದಾರೆ.

ಸಿಥೋಲ್ ಈ ಹಿಂದೆ ಅವಳಿ ಜವಳಿ ಮಗುವಿಗೆ ಜನ್ಮ ನೀಡಿದ್ದು, ನಾವು ಯಾವುದೇ ಗರ್ಭ ಧಾರಣಾ ಚಿಕಿತ್ಸೆ ಪಡೆದಿಲ್ಲ. ಇದು ನೈಸರ್ಗಿಕ ಪ್ರೆಗ್ನೆನ್ಸಿ ಎಂದು ಹೇಳಿದ್ದಾರೆ. ಸಿಥೋಲ್ ಬಳಿ ಈಗ ಮೊದಲ ಅವಳಿ ಜವಳಿ ಮಕ್ಕಳು ಮತ್ತು ಈಗಿನ 10 ಮಕ್ಕಳನ್ನು ಸೇರಿಸಿ 12 ಮಕ್ಕಳಿದ್ದಾರೆ.

ಮೊದಲ ಬಾರಿ ಗರ್ಭಿಣಿಯಾಗಿ ಜನಿಸಿದ ಮಕ್ಕಳಿಗಾಗಿ ತೆಗೆದುಕೊಂಡಿದ್ದ ಚಿಕಿತ್ಸೆಯಿಂದಾಗಿ ಎರಡನೇ ಬಾರಿ ಗರ್ಭಿಣಿಯಾದಾಗ 10 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವೈದ್ಯರು ತಿಳಿಸಿರುವುದಾಗಿ ಕೆಲ ಪ್ರತಿಕೆಗಳು ವರದಿ ಮಾಡಿವೆ.