ವೃದ್ಧನ ಎರಡು ತುಟಿಗಳನ್ನು ಹೊಲೆದು ರೈಲ್ವೇ ಟ್ರ್ಯಾಕ್ ಗೆ ಕಟ್ಟಿದ ಮಲಮಗ
ಜಾರ್ಖಾಂಡ್ ನ ಪಲಾಮು ಜಿಲ್ಲೆ ಉಂತರಿ ರಸ್ತೆಯ ಭಿಟಿಹರ ಗ್ರಾಮದಲ್ಲಿ ಘಟನೆ

ಎರಡೂ ತುಟಿಯನ್ನು ಸೇರಿಸಿ ಹೊಲೆದು ರೈಲ್ವೇ ಟ್ರ್ಯಾಕ್ ಗೆ ಕಟ್ಟಿ ಹಾಕಲಾಗಿದ್ದ 65 ವರ್ಷ ವಯಸ್ಸಿನ ವೃದ್ಧನನ್ನು ಜಾರ್ಖಾಂಡ್ ಪೊಲೀಸರು ರಕ್ಷಿಸಿದ್ದಾರೆ. ಸಿಗ್ ಸಿಗಿ ರೈಲ್ವೇ ಕ್ಯಾಬಿನ್ ಸಮೀಪ ನನ್ನ ಮಲಮಗ ತುಟಿಯನ್ನು ಹೊಲೆದು ರೈಲ್ವೇ ಟ್ರ್ಯಾಕ್ ಗೆ ಕಟ್ಟಿದ ಎಂದು ಮುದುಕ ಆರೋಪಿಸಿದ್ದಾನೆ. ಈ ಘಟನೆ ಜಾರ್ಖಾಂಡ್ ರಾಜ್ಯದ ಪಲಾಮು ಜಿಲ್ಲೆಯ ಉಂತರಿ ರಸ್ತೆ ಭಾಗದ ಭಿಟಿಹರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮಂಗಳವಾರ ರತ್ರಿ ನಾನು ಶೌಚಕ್ಕೆಂದು ಹೋದಾಗ ಇಬ್ಬರ ಜೊತೆ ಆಗಮಿಸಿದ ಮಲಮಗ ನನ್ನನ್ನು ಹಿಡಿದು ಹೊಡೆದ ಎಂದು 65 ವರ್ಷದ ಬೋಲಾರಾಮ್ ಪೊಲೀಸರಿಗೆ ಹೇಳಿದ್ದು, ನನ್ನನ್ನು ಥಳಿಸಿದ ನಂತರ ಮೂರು ಜನರು ಸೇರಿ ನನ್ನ ತುಟಿಯನ್ನು ಹಗ್ಗದಿಂದ ಹೊಲೆದು ಕಟ್ಟಿದರು, ನಂತರ ಕೈ ಕಾಲುಗಳನ್ನು ಕಟ್ಟಿ ಸಮೀಪದ ರೈಲ್ವೇ ಟ್ರ್ಯಾಕ್ ಬಳಿ ತೆಗೆದುಕೊಂಡು ಹೋಗಿ ರೈಲ್ವೇ ಸ್ಲೀಪರ್ ಗಳಿಗೆ ಕಟ್ಟಿದರು ಎಂದು ತಿಳಿಸಿದ್ದಾರೆ.
ರಾತ್ರಿ ಸುಮಾರು 11ಗಂಟೆಗೆ ನನ್ನನ್ನು ರೈಲ್ವೇ ಟ್ರ್ಯಾಕ್ ಗೆ ಕಟ್ಟಿ ಅವರು ಹೊರಟು ಹೋಗಿದ್ದರು, ಬೆಳ್ಳಂಬೆಳಗ್ಗೆ ರೈಲ್ಲೇ ಟ್ರ್ಯಾಕ್ ಬಳಿಗೆ ಧಾವಿಸಿದ ಕೆಲವು ಗ್ರಾಮಸ್ಥರು ಇದನ್ನು ನೋಡು ಪೊಲೀಸರಿಗೆ ತಿಳಿಸಿದ್ದಾರೆ. ಆನಂತರ ಮುದುಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಹಗ್ಗದಿಂದ ಸ್ಟಿಚ್ ಮಾಡಲಾಗಿದ್ದ ಎರಡೂ ತುಟಿಗಳನ್ನು ಬಿಚ್ಚಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
2010ರಲ್ಲಿ ಮೊದಲ ಹೆಂಡತಿ ಮೃತಪಟ್ಟ ಹಿನ್ನೆಲೆ ಎರಡನೇ ಹೆಂಡತಿ ಬೋಲಾರಾಮ್ ಮದುವೆಯಾಗಿದ್ದರು. ಈ ಹಿನ್ನೆಲೆ ಇದು ಈ ವಿಚಾರವಾಗಿ ಸಮಸ್ಯೆ ಎದುರಾಗಿ ನ್ಯಾಯಪಂಚಾಯ್ತಿ ನಡೆದಿತ್ತು. ಈ ಕೃತ್ಯಕ್ಕೆ ಈ ಘಟನೆಯೇ ಕಾರಣವೆಂದು ತಿಳಿದುಬಂದಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.