ಕೋವಿಡ್ 3ನೇ ಅಲೆ ಆಗಸ್ಟ್ ತಿಂಗಳಿನಲ್ಲಿ ಅಪ್ಪಳಿಸುವ ಸಾಧ್ಯತೆ

ಆಕ್ಟೋಬರ್ ತಿಂಗಳಿನಲ್ಲಿ ಗರಿಷ್ಠ ಮಟ್ಟಕ್ಕೆ ತಲುಪಲಿದೆ: ಎಸ್ ಬಿಐ ವರದಿ

 | 
Representative Image

ಭಾರತ ಕಳೆದ ಒಂದು ತಿಂಗಳಿಂದ ಕೋವಿಡ್ ಎರಡನೇ ಅಲೆಯಿಂದ ನಿಟ್ಟುಸಿರು ಬಿಡುತ್ತಿರುವಾಗಲೇ ಅಘಾತಕಾರಿ ಸುದ್ಧಿಯೊಂದು ಹೊರಬಿದ್ದಿದೆ. ದೇಶದಲ್ಲಿ ಕೋವಿಡ್ ಮೂರನೇ ಅಲೆ ಮುಂದಿನ ತಿಂಗಳು ಆಗಸ್ಟ್ ನಿಂದ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯೊಂದು ತಿಳಿಸಿದೆ.

'ಎಸ್ ಬಿಐ ಕೋವಿಡ್ 19: ಅಂತಿಮ ಗೆರೆಯ ಓಟ' ಎಂಬ ಹೆಸರಿನ ಸಂಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಈ ವರದಿಯಲ್ಲಿ ಕೊರೋನಾ ಮೂರನೇ ಅಲೆ ಸೆಪ್ಟೆಂಬರ್ 2021 ರಂದು ಗರಿಷ್ಠ ಮಟ್ಟಕ್ಕೆ ತಲುಪಲಿದೆ ಎಂದು ಹೇಳಿರುವುದಾಗಿ ಲೈವ್ ಮಿಂಟ್ ವರದಿ ಮಾಡಿದೆ.

ತನ್ನ ವರದಿಯಲ್ಲಿ ಕೋವಿಡ್ ಎರಡನೇ ಅಲೆಯ ಕುರಿತು ಹೇಳಿರುವ ಎಸ್ ಬಿಐ, ಭಾರತದಲ್ಲಿ ಎರಡನೇ ಅಲೆಯು ಮೇ 7ರಂದು ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಏಪ್ರಿಲ್ ನಲ್ಲಿ ಎರಡನೇ ಅಲೆ ಅಪ್ಪಳಿಸಿ ಮೇ ತಿಂಗಳಿನಲ್ಲಿ ಗರಿಷ್ಠ ಮಟಕ್ಕೆ ತಲುಪಿತ್ತು. ಇದರಿಂದ ದೆಹಲಿ, ಮಹಾರಾಷ್ಟ್ರ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾವಿರಾರು ಕುಟುಂಬಗಳ ಮೇಲೆ ಪರಿಣಾಮ ಬೀರಿತ್ತು.

ಪ್ರಸ್ತುತ ಮಾಹಿತಿಯ ಪ್ರಕಾರ, ಜುಲೈ ಎರಡನೇ ವಾರದಲ್ಲಿ ಕೆಲವು ಕಡೆ 10ಸಾವಿರಕ್ಕೂಕಾಣಿಸಿಕೊಳಲಿವೆ, ಅದಾಗ್ಯೂ, ಪ್ರಕರಣಗಳು ಮೂರನೇ ಅಲೆ ಆಗಸ್ಟ್ ಮಧ್ಯದಲ್ಲಿ ಹೆಚ್ಚಾಗಲು ಪ್ರಾರಂಬವಾಗಬಹುದು ಎಂದು ಎಸ್ ಬಿಐ ವರದಿ ತಿಳಿಸಿದೆ.