ಮ್ಯಾನ್‌ಹೋಲ್‌ಗೆ ಇಳಿದಿದ್ದ ಮೂವರು ಕಾರ್ಮಿಕರು ಸಾವು

ರಾಮನಗರದ ಐಜೂರಿನ ನೇತಾಜಿ ಪಾಪ್ಯೂಲರ್ ಶಾಲೆ ಬಳಿ ಘಟನೆ

 | 
Fire Brigade of Ramanagara

ರಾಮನಗರ: ಮ್ಯಾನ್‌ಹೋಲ್‌ಗೆ ಇಳಿದಿದ್ದ ಮೂವರು ಕಾರ್ಮಿಕರು ಮೃತಪಟ್ಟರುವ ಘಟನೆ ರಾಮನಗರದ ಐಜೂರು ನಗರದ ನೇತಾಜಿ ಪಾಪ್ಯೂಲರ್ ಶಾಲೆಯ ಬಳಿ ನಡೆದಿದೆ.

ಬೆಂಗಳೂರಿನ ಕಮಲಾನಗರ ನಿವಾಸಿಗಳಾದ ಮಂಜುನಾಥ್, ರಾಜೇಶ್, ಮಂಜುನಾಥ್ ಮೃತಪಟ್ಟಿದ್ದರು, ಯಾವುದೇ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳದೆ ಮ್ಯಾನ್‌ಹೋಲ್‌ನ 20 ಅಡಿ ಆಳಕ್ಕೆ ಇಳಿದಿದ್ದರಿಂದು ಕಾರ್ಮಿಕರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.

ಅಗ್ನಿಶಾಮಕ ದಳದ ಸಿಬ್ಬಂದಿ ಆಮ್ಲಜನಕದ ಮಾಸ್ಕ್ ತೊಟ್ಟು ಮ್ಯಾನ್‌ಹೋಲ್‌ನ ಒಳಗಿಳಿದು ಶವಗಳನ್ನು ಹೊರತೆಗಿದಿದ್ದಾರೆ. ಈ ಪ್ರಕರಣದಲ್ಲಿ ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.