ಮೃತ ಬಿಜೆಪಿ ನಾಯಕನ ಅಂತ್ಯಕ್ರಿಯೆ ಮಾಡಲು ಹೆದರಿದ ಬಿಜೆಪಿ ಕಾರ್ಯಕರ್ತರು

ಟಿಎಂಸಿ ಕಾರ್ಯಕರ್ತರಿಂದ ಬಿಜೆಪಿ ನಾಯಕನ ಅಂತಿಮ ಸಂಸ್ಕಾರ

 | 
ಮೃತ ಬಿಜೆಪಿ ನಾಯಕನ ಅಂತ್ಯಕ್ರಿಯೆ ಮಾಡಲು ಹೆದರಿದ ಬಿಜೆಪಿ ಕಾರ್ಯಕರ್ತರು

ಕೊಲ್ಕತ್ತಾ: ಬಿಜೆಪಿ ನಾಯಕನೋರ್ವನ ಅಂತ್ಯಕ್ರೆಯೆ ಮಾಡಲು ಬಿಜೆಪಿ ಕಾರ್ಯಕರ್ತರು ಹೆದರಿದ ಹಿನ್ನೆಲೆ ಟಿಎಂಸಿ ಕಾರ್ಯಕರ್ತರು ಅಂತಿಮ ಸಂಸ್ಕಾರ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯಲ್ಲಿ ನಡೆದಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಇಂಗ್ಲೀಷ್ ಪತ್ರಿಕೆ ವರದಿ ಮಾಡಿದೆ.

ಬಿಜೆಪಿಯ ಬೂತ್ ಮಟ್ಟದ ಅಧ್ಯಕ್ಷರಾಗಿದ್ದ 60 ವರ್ಷದ ಅನೂಪ್ ಬ್ಯಾನರ್ಜಿ ಹೃದಯಾಘಾತದಿಂದ ಮೃತಪಟ್ಟಿದ್ದರು, ಅವರ ಅಂತ್ಯಕ್ರಿಯೆಯನ್ನು ನಡೆಸಿಕೊಂಡುವಂತೆ ಅನೂಪ್ ಬ್ಯಾನರ್ಜಿಯವರ ಪತ್ನಿ ರೀನಾ ಬಿಜೆಪಿ ಕಾರ್ಯಕರ್ತರ ಬಳಿ ಕೇಳಿಕೊಂಡಿದ್ದಾರೆ. ಆದರೆ, ಕೋವಿಡ್ ನಿಂದ ಮರತಪಟ್ಟಿದ್ದಾರೆ ಎಂದು ತಿಳಿದ ಬಿಜೆಪಿ ಕಾರ್ಯಕರ್ತರು ಯಾರೂ ಮುಂದೆ ಬಂದು ಅಂತ್ಯ ಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ.

ನಂತರ ರೀನಾ ಅವರು ಒಂದು ದಿನ ಮೃತದೇಹದ ಬಳಿ ಕಾವಲಿದ್ದು, ಮತ್ತೆ ಬಿಜೆಪಿ ಕಾರ್ಯಕರ್ತರ ಬಳಿ ಅವರು ಕೋವಿಡ್ ನಿಂದ ಮೃತಪಟ್ಟಿಲ್ಲ ದಯವಿಟ್ಟು ಅಂತ್ಯಕ್ರಿಯೆ ಮಾಡಲು ಸಹಕರಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ ಆದರೂ ಯಾರು ಸಹಾಯಕ್ಕೆ ಬಂದಿಲ್ಲ. ನಂತರ ತೃಣಮೂಲ ಕಾಂಗ್ರೆಸ್ ನ ಸ್ಥಳೀಯ ಮುಖಂಡ ಬುಡೆನ್ ಶೇಖ್ ತಮ್ಮ ಕಾರ್ಯಕರ್ತರ ಜೊತೆ ಬಂದು ಜಿಜೆಪಿಯ ಅನೂಪ್ ಬ್ಯಾನರ್ಜಿಯ ಮೃತದೇಹ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅನೂಪ್ ಬ್ಯಾನರ್ಜಿಯ ಪತ್ನಿ ರೀನಾ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಪತಿ ಬಿಜೆಪಿಗೆ ಕಷ್ಟಪಟ್ಟು ದುಡಿದಿದ್ದರು, ಆದರೆ ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದ್ದರು, ಅವರಿಗೆ ಕೊರೋನಾದ ಯಾವುದೇ ಲಕ್ಷಣಗಳಿರಲಿಲ್ಲ ಎಂದು ತಿಳಿಸಿದ್ದಾರೆ.

ನಂತರ ನನ್ನ ಪತಿಯ ಸಾವಿನ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾಹಿತಿ ನೀಡಿದೆ, ಶೀಘ್ರದಲ್ಲೇ ಬರುವುದಾಗಿ ಹೇಳಿದ ಅವರು ಒಂದು ದಿನ ಕಳೆದರೂ ಯಾರೂ ಬರಲಿಲ್ಲ, ನನ್ನ ಪತಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂಬ ವದಂತಿ ಹಬ್ಬಿತ್ತು ಎಂದು ಹೇಳಿದ್ದಾರೆ.

ಮೃತದೇಹವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗುವ ವಾಹನ ವ್ಯವಸ್ಥೆ ಮಾಡಲು ನನಗೆ ಸಾಧ್ಯವಾಗಲಿಲ್ಲ. ರಾತ್ರಿಯಿಡ ಬಿರುಗಾಳಿ ಸಹಿತ ಭಭಾರಿ ಮಳೆ ಸುರಿಯುತ್ತಿತ್ತು, ನಾನ ನನ್ನ ಪತಿಯ ಮೃತದೇಹದ ಜೊತೆ ರಾತ್ರಿಯಿಡೀ ಕಳೆಯಬೇಕಾಯ್ತು ನಂತರ ಟಿಎಂಸಿ ಕಾರ್ಯಕರ್ತರ ಸಹಾಯದಿಂದ ಅಂತ್ಯಸಂಸ್ಕಾರ ನಡೆಸಲಾಯಿತು ಎಂದು ರೀನಾ ತಮ್ಮ ಅಳಲು ತೋಡಿಕೊಂಡಿದ್ದಾರೆ.