ಸಿಡಿಲಬ್ಬರಕ್ಕೆ ದೇಶದಲ್ಲಿ 68 ಸಾವು

ಉತ್ತರಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಸಾವು

 | 
total of 68 people died in separate lightning incidents across Uttar Pradesh, Madhya Pradesh and Rajasthan

ನವದೆಹಲಿ: ಸಿಡಲು ಬಡಿತಕ್ಕೆ 68ಮಂದಿ ಪ್ರತ್ಯೇಕವಾಗಿ ಸಾವನಪ್ಪಿರುವ ಘಟನೆ ಉತ್ತರಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ನಡೆದಿದೆ.

ಭಾರಿ ಸಿಡಿಲಿನ ಹೊಡೆತದಿಂದ ಉತ್ತರಪ್ರದೇಶದಲ್ಲಿ 41 ಮಂದಿ, ಮಧ್ಯಪ್ರದೇಶದಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಹಾಗೆ, ಸಿಡಿಲ ಬಡಿತಕ್ಕೆ ರಾಜಸ್ಥಾನದಲ್ಲಿ 20 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಕೋಟಾ ಮತ್ತು ಧೋಲ್ಪುರ್ ಜಿಲ್ಲೆಯ ಏಳು ಮಕ್ಕಳು ಸಾವನ್ನಪ್ಪಿದ್ದಾರೆ. ಹತ್ತು ಮಂದಿಗೆ ಗಾಯಗಳಗಿವೆ ಎಂದು ತಿಳಿದು ಬಂದಿದೆ.

ಉತ್ತರಪ್ರಧೇಶದಾದ್ಯಂತ 41 ಜನರು ಸಿಡಲಿಗೆ ಸಾವನ್ನಪ್ಪಿರುವುದಾಗಿ ಪ್ರಾಥಾಮಿಕ ವರದಿಯಿಂದ ತಿಳಿದು ಬಂದಿದ್ದು, ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ 14 ಕಾನ್ಪುರ, ಫತೇಪುರ್ ದೇಹತ್ ತಲಾ ಐವರು ಕೌಸಂಬಿಯಲ್ಲಿ ನಾಲ್ಕು ಫಿರೋಜಾಬಾದ್ ನಲ್ಲಿ ಮೂರು, ಉನ್ನಾವೋ, ಹಮೀರ್ ಪುರ್ ಮತ್ತು ಸೋನ್ ಭದ್ರದಲ್ಲಿ ತಲಾ ಒಬ್ಬರು ಸೇರಿದಂತೆ ವಿವಿಧೆಡೆ ಒಟ್ಟು 41 ಮಂದಿ ಸಾವನ್ನಪ್ಪಿದ್ದಾರೆ.

ರಾಜಸ್ಥಾನದಲ್ಲಿ 20 ಮಂದಿ ಸಾವನ್ನಪ್ಪಿದ್ದು 10 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಸಿಡಿಲಿನಿಂತ ಮೃತಪಟ್ಟಿರುವ ಕುಟುಂಬಸ್ಥರಿಗೆ ಐದು ಲಕ್ಷ ರೂಪಾಯಿಗಳ ನೆರವು ಘೋಷಿಸಿದ್ದಾರೆ.

ಮಧ್ಯಪ್ರದೇಶದ ಶಿಯೋಪುರ ಮತ್ತು ಗ್ವಾಲಿಯಾರ್ ಜಿಲ್ಲೆಯಲ್ಲಿ ತಲಾ ಇಬ್ಬರು ಶಿವಪುರಿಯಲ್ಲಿ 1 ಅನ್ನುಪುಲ ಮತ್ತು ಬೆತ್ತುಲ್ ನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.