3ನೇ ಮದುವೆಗೆ ಯೋಜಿಸಿದ್ದ ಗಂಡನ ಗಂಡಸ್ತನವನ್ನು ತುಂಡರಿಸಿದ ಹೆಂಡತಿ
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಘಟನೆ

ಮುಜಾಫರ್ ನಗರ: ಮೂರನೇ ಮದುವೆಗೆ ತುದಿಗಾಲಿನಲ್ಲಿ ನಿಂತಿದ್ದ 57 ವರ್ಷದ ಮೌಲ್ವಿಯೋರ್ವನ ಗಂಡಸ್ತನವನ್ನು ಆತನ ಹೆಂಡತಿಯೊಬ್ಬಳು ತುಂಡರಿಸಿದ್ದಾಳೆ. ಈ ಘಟನೆ ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಈ ಘಟನೆ ಶಿಖರ್ಪುರ ಗ್ರಾಮದಲ್ಲಿ ಗುರುವಾರ ಸಂಜೆ ನಡೆದಿದೆ. ಈಗಾಗಲೇ ಎರಡು ಮದುವೆಯಾಗಿದ್ದ ಮೌಲ್ವಿಗೆ ಮೂರನೇ ಮದುವೆ ಬೇಡವೆಂದ ಮೌಲ್ವಿ ವಕೀಲ್ ಅಹ್ಮದ್ ಗೆ ಹೇಳಿದ್ದಳು, ಆದರೆ, ಮೌಲ್ವಿ ತನ್ನ ಹೆಂಡತಿಯ ಮಾತು ಕೇಳದ ಹಿನ್ನಲೆ ಈ ರೀತಿ ದಾಳಿ ನಡೆಸಿ ಕೊಂದಿದ್ದಾಳೆ ಎಂದು ಘಟನೆಯ ಕುರಿತು ಪಿಟಿಐ ಮತ್ತು ಇಂಡಿಯಾ ಟುಡೆ ವರದಿ ಮಾಡಿದೆ.
ಹಜ್ರಾಳ ಗಂಡ ಮೌಲ್ವಿ ಇನ್ನೋರ್ವ ಮಹಿಳೆಯನ್ನು ಮೂರನೇ ಮದುವೆ ಮಾಡಿಕೊಳ್ಳಲು ತಯಾರಿ ಯೋಜಿಸಿದ್ದನಂತೆ, ಈ ಸಂಬಂಧ ಇಬ್ಬರ ನಡುವೆ ಜಗಳ ಕೂಡ ನಡೆದಿತ್ತು. ರಾತ್ರಿ ವೇಳೆ ಮೌಲ್ವಿ ಮಲಗಿದಾಗ ಹಜ್ರಾ ಹರಿತವಾದ ಚಾಕುವಿನಿಂದ ಮೌಲ್ವಿ ಗಂಡಸ್ತನವನ್ನೇ ತುಂಡರಿಸಿದ್ದಾಳೆ, ರಕ್ತ ಮಡುಗಟ್ಟಿ ಮೌಲ್ವಿ ಸಾವನ್ನಪ್ಪಿದ ಎಂದು ಹಜ್ರಾ ಪೊಲೀಸರಿಗೆ ತಿಳಿಸಿದ್ದಾಳೆ.
ಆನಂತರ ಆರೋಪಿ ಹಜ್ರಾ ತನ್ನ ಸಂಬಂಧಿಕರ ನೆರವಿನಿಂದ ಮೌಲ್ವಿಯ ಅಂತಿಮ ಸಂಸ್ಕಾರ ನಡೆಸಿದ್ದಾಳೆ. ನೆರೆಹೊರೆಯವರು ಈ ವಿಷಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಈ ಸಂಬಂಧ ಪೊಲೀಸರು ಹಜ್ರಾಳನ್ನು ಪ್ರಶ್ನೆ ಮಾಡಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಈ ಸಂಬಂಧ ಹಜ್ರಾ ವಿರುದ್ಧ ಭೋರಕ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.