ನಮ್ಮಮ್ಮ ಸತ್ತು ಹೋಗ್ತಾರೆ. ಆಕ್ಷಿಜನ್ ಸಿಲೀಂಡರ್ ತೆಗೆದುಕೊಂಡು ಹೋಗಬೇಡಿ ಪ್ಲೀಸ್…

ಪೊಲೀಸರೆದುರು ಮಂಡಿಯೂರಿ ಪರಿತಪ್ಪಿಸಿದ ವ್ಯಕ್ತಿ: ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್

 | 
ನಮ್ಮಮ್ಮ ಸತ್ತು ಹೋಗ್ತಾರೆ. ಆಕ್ಷಿಜನ್ ಸಿಲೀಂಡರ್ ತೆಗೆದುಕೊಂಡು ಹೋಗಬೇಡಿ ಪ್ಲೀಸ್…

ಆಗ್ರಾ: ಕೊರೋನಾ ಎರಡನೇ ಅಲೆಯಿಂದಾಗಿ ದೇಶದೆಲ್ಲೆಡೆ ಆಕ್ಷಿಜನ್ ಗೆ ಆಭಾವ ತಲೆದೂರಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕೋವಿಡ್ ಸೋಂಕುವಿನಿಂದ ಗಂಭೀರ ಸ್ಥತಿಗೆ ತಲುಪಿ ಪ್ರಾಣವಾಯುವಿಗಾಗಿ ಪರಿತಪ್ಪಿಸುತ್ತಿರುವವರ ಸಂಖ್ಯೆ ದೇಶದೆಲ್ಲೆಡೆ ದಿನೇ ದಿನೇ ಹೆಚ್ಚಾಗುತ್ತಿದೆ.

ಉತ್ತರಪ್ರದೇಶದ ಆಗ್ರಾದ ಖಾಸಗಿ ಆಸ್ಪತ್ರೆಯಲ್ಲೋರ್ವ ವ್ಯಕ್ತಿ ತನ್ನ ಅಮ್ಮನ ಜೀವ ಉಳಿಸುವ ಪ್ರಾಣವಾಯುವಿಗಾಗಿ ಪೊಲೀಸರ ಎದುರು ಮಂಡಿಯೂರಿ ಪರಿಪರಿಯಾಗಿ ಬೇಡಿಕೊಳ್ಳುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎಸ್ಕಾರ್ಟ್ ಸಮೇತ ಆಸ್ಪತ್ರೆಗೆ ಬಂದ ಆಂಬ್ಯುಲೆನ್ಸ್ ಗೆ ಆಕ್ಷೀಜನ್ ಸಿಲೀಂಡರ್ಗಳನ್ನು ತುಂಬುತ್ತಿರುವ ವೇಳೆ, ಕೋವಿಡ್ ನಿಂದ ಗಂಭೀರ ಸ್ಥಿತಿಗೆ ತಲುಪಿರುವ ರೋಗಿಯ ಮಗನೋರ್ವ ಪಿಪಿಇ ಕಿಟ್ ನಲ್ಲಿ ಬಂದು “ನನ್ನ ಅಮ್ಮ ಸತ್ತುಹೋಗ್ತಾರೆ” ಆಕ್ಷಿಜನ್ ಸಿಲಿಂಡರ್ಗಳನ್ನು ತೆಗೆದುಕೊಂಡು ಹೋಗಬೇಡಿ ಎಂದು ಈ ವೀಡಿಯೋದಲ್ಲಿ ಪೊಲೀಸರ ಎದುರು ಕೈಮುಗಿದು ಬೇಡಿಕೊಳ್ಳುವ ದೃಶ್ಯ ದಾಖಲಾಗಿದೆ.

ದಯವಿಟ್ಟು ಬೇಡಿಕೊಳ್ಳುತ್ತೇನೆ ಸಾರ್. ಆಕ್ಷಿಜನ್ ಸಿಲಿಂಡರ್ ತೆಗೆದುಕೊಂಡು ಹೋದ್ರೆ, ನಾನೆಲಿಂದ ಆಕ್ಷೀಜನ್ ಸಿಲಿಂಡರ್ ಗಳ ವ್ಯವಸ್ಥೆ ಮಾಡಲಿ, ನಮ್ಮ ಅಮ್ಮನನ್ನ ನಾನು ಮತ್ತೆ ಮನೆಗೆ ವಾಪಾಸ್ ಕರೆತರುತ್ತೇನೆ ಎಂದು ಕುಟುಂಬದವರಿಗೆ ಪ್ರಮಾಣ ಮಾಡಿದ್ದೇನೆ ಎಂದು ದುಖಃದಿಂದ ಕೇಳಿಕೊಳ್ಳುತ್ತಿದ್ದಾನೆ. ಆದರೆ ಪೊಲೀಸರ ಮನ ಇದಕ್ಕೆ ಕರಗುವುದಿಲ್ಲ. ಮತ್ತೋರ್ವ ವ್ಯಕ್ತಿ ಬಂದು ದುಖಿಃತಪ್ತ ವ್ಯಕ್ತಿಯನ್ನು ಸಮಾಧಾನಪಡಿಸುತ್ತಾನೆ.

ಈ ಘಟನೆಯ ಕುರಿತು ಯೂಥ್ ಕಾಂಗ್ರೆಸ್ ಸಹ ವೀಡಿಯೋ ಹಂಚಿಕೊಂಡಿದ್ದು, ಇದೊಂದು ಅಮಾನವೀಯ ಘಟನೆ ಎಂದು ಖಂಡಿಸಿದೆ. ಪೊಲೀಸರು ಈ ಆರೋಪವನ್ನು ನಿರಾಕರಿಸಿದ್ದು, ಇದರಲ್ಲಿ ನಮ್ಮದೇನು ತಪ್ಪಿಲ್ಲ, ಪೊಲೀಸರು ಖಾಲಿ ಸಿಲಿಂಡರ್ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಆಗ್ರಾದ ಎಸ್ಪಿ ಬೋತ್ರೆ ರೋಹನ್ ಪ್ರಮೋದ್ ತಿಳಿಸಿದ್ದಾರೆ.

ಆದರೆ, ಎಸ್ಕಾರ್ಟ್ ನಲ್ಲಿ ಬಂದು ಸಿಲೀಂಡರ್ಗಳನ್ನ ತೆಗದುಕೊಂಡು ಹೋಗುವುದು ಮತ್ತು ಆ ವ್ಯಕ್ತಿ ನೋವಿನಿಂದ ಪರಿಪರಿಯಾಗಿ ಬೇಡಿಕೊಳ್ಳುವುದು, ವ್ಯಕ್ತಿ ಅಷ್ಟೊಂದು ಬೇಡಿಕೊಂಡರೂ ಪೊಲೀಸರು ಅವನಿಗೆ ವಾಸ್ತವ ಏನು ಅನ್ನುವುದನ್ನು ತಿಳಿಸದೇ ಸುಮ್ಮನೇ ಮನಕರಗದವರಂತೆ ನಿಂತಿರುವುದು ಒಂದು ರೀತಿ ಗೋಜಲು ಅನಿಸುತ್ತದೆ. ಆದ್ದರಿಂದ, ಈ ವೀಡಿಯೋ ಹಿಂದಿನ ಸತ್ಯಾಸತ್ಯತೆ ಇನ್ನೂ ತಿಳಿಯಬೇಕಾಗಿದೆ.