ಕೋವಿಡ್ ವ್ಯಾಕ್ಸಿನೇಷನ್ ಗೆ ಹೆದರಿ ನದಿ ಹಾರಿದ ಗ್ರಾಮಸ್ಥರು

ಉತ್ತರಪ್ರದೇಶದ ಬಾರಬಂಕಿಯ ಗ್ರಾಮವೊಂದರಲ್ಲಿ ನಡೆದ ವಿಲಕ್ಷಣ ಘಟನೆ

 | 
sarayu river

ಬಾರಬಂಕಿ(UP): ಜನರಿಗೆ ಲಸಿಕೆ ನೀಡಲು ಗ್ರಾಮಕ್ಕೆ ಆಗಮಿಸಿದ ವೈದ್ಯಕೀಯ ಸಿಬ್ಬಂದಿಗೆ ಹೆದರಿದ ಜನರು ಎದ್ನೋ ಬಿದ್ನೋ ಅಂತಾ ಸರಾಯು ನದಿಗೆ ಹಾರಿ ತಪ್ಪಿಸಿಕೊಂಡ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ನಡೆದಿದೆ.

ಈ ಘಟನೆ ಶನಿವಾರ ನಡೆದಿದೆ ಎಂದು ರಾಮನಗರ ತಹಶಿಲ್ ಉಪವಿಭಾಗದ ಮ್ಯಾಜಿಸ್ಟ್ರೇಟ್ ರಾಜೀವ ಕುಮಾರ್ ಶುಕ್ಲಾ ಹೇಳಿದ್ದಾರೆ. ವ್ಯಾಕ್ಸಿನ್ ಬಗ್ಗೆ ಜನರು ತಿಳಿದಿದ್ದ ಮಿತ್ಯಗಳನ್ನು ಹೋಗಲಾಡಿಸಲು ವ್ಯಾಕ್ಸಿನ್ ಪ್ರಾಮುಖ್ಯತೆ ಮತ್ತು ಅದರ ಉಪಯೋಗಗಳ ಬಗ್ಗೆ ಜನರಿಗೆ ತಿಳಿ ಹೇಳಿದರೂ ಆ ಗ್ರಾಮದಲ್ಲಿ ಕೇವಲ 14ಜನರು ಮಾತ್ರ ವ್ಯಾಕ್ಸಿನ್ ಪಡೆದಿಕೊಂಡರು ಎಂದು ಶುಕ್ಲಾ ತಿಳಿಸಿದ್ದಾರೆ.

ಅದು ಲಸಿಕೆಯಲ್ಲ ಅದೊಂದು ವಿಷಕಾರಿ ಇಂಜೆಕ್ಷನ್ ಎಂದು ತಿಳಿದು ವೈದ್ಯಕೀಯ ಸಿಬ್ಬಂಧಿ ಗ್ರಾಮಕ್ಕೆ ಆಗಮಿಸಿದಾಗ ನಾವು ನದಿಗೆ ಹಾರಿ ಇನ್ನೊಂದು ದಡ ಸೇರಿದೆವು ಎಂದು ಕೆಲವು ಗ್ರಾಮಸ್ಥರು ಹೇಳಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಕೋವಿಡ್ ಮಹಾಮಾರಿ ದೇಶವನ್ನು ಕಾಡಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ದೇಶದಲ್ಲಿಯೂ ಲಸಿಕೆಯ ಅಭಾವ ಎದುರಾಗಿದೆ. ಇನ್ನೊಂದು ಕಡೆ ಕೊರೋನಾಗೆ ತಡೆಗೆ ಲಸಿಕೆಯೇ ಪರಿಹಾರ ಎಂದು ತಜ್ಞರು ಹೇಳುತ್ತಿರುವ ಈ ಸಂದರ್ಭದಲ್ಲಿ ಉತ್ತರಪ್ರದೇಶದ ಈ ಗ್ರಾಮಸ್ಥರು ಲಸಿಕೆ ಕಂಡು ನದಿ ಹಾರಿ ಮೈಲಿ ದೂರು ಓಡುತ್ತಿರುವುದು ಅಚ್ಚರಿ ಎನ್ನಿಸಿದೆ ಮತ್ತು ಅವರ ದಡ್ಡತನವನ್ನು ಎತ್ತಿತೋರಿಸುತ್ತದೆ.