ನಾಲಿಗೆ ಕತ್ತರಿಸಿ ಹರಕೆ ತೀರಿಸಿದ ಮಹಿಳೆ!

ಡಿಎಂಕೆ ಗೆದ್ದಿದಕ್ಕೆ ಅಭಿಮಾನಿಯೊಬ್ಬಳ ಹುಚ್ಚು ಹರಕೆ

 | 
ನಾಲಿಗೆ ಕತ್ತರಿಸಿ ಹರಕೆ ತೀರಿಸಿದ ಮಹಿಳೆ!

ತಮಿಳುನಾಡಿನಲ್ಲಿ ಇಷ್ಟು ದಿನ ವಿರೋಧ ಪಕ್ಷವಾಗಿದ್ದ ಡಿಎಂಕೆ ದಶಕದ ನಂತರ ಗೆದ್ದು ಅಧಿಕಾರದ ಗದ್ದುಗೆ ಹಿಡಿದಿದೆ. ಅಧಿಕಾರ ಸ್ವೀಕಾರಕ್ಕೆ ಡಿಎಂಕೆ ತಯಾರಿ ನಡೆಸುತ್ತಿದೆ. ಆದರೆ, ವನಿತಾ ಎಂಬ ತಮಿಳುನಾಡಿನ ಮಹಿಳೆಯೊಬ್ಬರು ಡಿಎಂಕೆ ಗೆದ್ದಿದ್ದಕ್ಕೆ ತನ್ನ ನಾಲಿಗೆಯನ್ನು ಕತ್ತರಿಸಿ ಹರಕೆ ತೀರಿಸಿದ್ದಾಳೆ.

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಗೆದ್ದ ನಂತರ ಮುಂಜಾನೆ ಮುತ್ತಾಲಮ್ಮನ ದೇವಸ್ಥಾನಕ್ಕೆ ತೆರಳಿದ 32 ವರ್ಷ ವಯಸ್ಸಿನ ವನಿತಾ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಹರಕೆಯನ್ನು ತೀರಿಸಿದ್ದಾರೆ.

ಕೋವಿಡ್ ಹಿನ್ನೆಲೆ ದೇವಸ್ಥನಗಳ ಬಾಗಿಲು ತೆರೆಯದ ಕಾರಣ ಕತ್ತರಿಸಿದ ತನ್ನ ನಾಲಿಗೆಯನ್ನು ದೇವಸ್ಥಾನದ ಬಾಗಿಲಿನಲ್ಲೇ ಇಟ್ಟಿದ್ದಾರೆ. ನಂತರ ಆಕೆ ಎಚ್ಚರ ತಪ್ಪಿ ಬಿದ್ದಿದ್ದು, ಸ್ಥಳದಲ್ಲಿದ್ದವರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.