ಮನೆ ಬಿಟ್ಟು ಹೊರಹೋಗಿದ್ದ ಕಾರಣಕ್ಕೆ ಯುವತಿಗೆ ಥಳಿಸಿದ ಸಂಬಂಧಿಕರು
ಯುವತಿಗೆ ಥಳಿಸುವ ಮನಲಕುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಅಲಿರಾಜ್ ಪುರ್(ಮಧ್ಯಪ್ರದೇಶದ): ಮಾವನ ಮನೆಯನ್ನು ಬಿಟ್ಟು ಹೊರಹೋಗಿದ್ದ ಕಾರಣಕ್ಕೆ 19 ವರ್ಷದ ಯುವತಿಯ ಮೇಲೆ ಆಕೆಯ ತಂದೆ ಮತ್ತು ಸಂಬಂಧಿಕರು ಸಾರ್ವಜನಿಕವಾಗಿ ತಲೆಜುಟ್ಟು ಹಿಡಿದು ಎಳೆದಾಡಿ ಕಟ್ಟಿಗೆಯಿಂದ ಮನಬಂದಂತೆ ಹೊಡೆದಿದ್ದಾರೆ.
ಈ ರೀತಿ ಮನಲಕುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಕಳೆದ ಮೂರು ತಿಂಗಳ ಹಿಂದೆ 19 ವರ್ಷದ ಯುವತಿಯನ್ನು ಮದುವೆ ಮಾಡಲಾಗಿತ್ತು. ಯುವತಿಯ ತಂದೆ ಮನೆಗೆ ಭೇಟಿ ನೀಡಿದ ವೇಳೆ ಮಾವನ ಮನೆಯಲ್ಲಿ ಇರಲಿಲ್ಲವೆಂದು ಕೋಪಗೊಂಡ ಕುಟುಂಬಸ್ಥರು ಆಕೆಯನ್ನು ಥಳಿಸಿದ್ದಾರೆ.
ಮೊಬೈಲ್ ಪೋನ್ ಗಳಲ್ಲಿ ಸೆರೆಯಾಗಿರುವ ವಿಡಿಯೋಗಳಲ್ಲಿ ಮಹಿಳೆಗೆ ಮನಬಂದಂತೆ ಮನಬಂದಂತೆ ಥಳಿಸಲಾಗಿದೆ. ಯುವತಿ ಥಳಿಸದಂತೆ ಗೋಳಾಡಿ ಬೇಡಿಕೊಂಡರು ಓರ್ವ ವ್ಯಕ್ತಿ ಮನಬಂದಂತೆ ಥಳಿಸಿ ಕಟ್ಟಿಗೆ ಮುರಿದ ನಂತರ ಆಕೆಗೆ ಥಳಿಸುವುದನ್ನು ನಿಲ್ಲಿಸುತ್ತಾನೆ. ಅಲ್ಲಿ ನೆರೆದಿದ್ದ ಯಾರೋಬ್ಬರೂ ಆಕೆಯ ಸಹಾಯಕ್ಕೆ ಬರುವುದಿಲ್ಲ.
ಈ ಘಟನೆ ಮಧ್ಯಪ್ರದೇಶದ ರಾಜಧಾನಿ ಯಿಂದ 400 ಕಿಲೋಮೀಟರ್ ದೂರದಲ್ಲಿರುವ ಅಲಿರಾಜ್ ಪುರದಲ್ಲಿ ನಡೆದಿದ್ದು, ಥಳಿತಕ್ಕೊಳಗಾದ ಹುಡುಗಿ ಬುಡಕಟ್ಟು ಸಮುದಾಯದವಳಾಗಿದ್ದಾಳೆ. ಈ ವಿಡಿಯೋ ಪೊಲೀಸರ ಗಮನಕ್ಕೆ ಬಂದ ನಂತರ ಪೊಲೀಸರು ಆಕೆಯ ತಂದೆ ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.