ತಂದೆ ಅಗಲಿಕೆಯಿಂದ ಮನನೊಂದು ತಂದೆ ಚಿತೆಗೆ ಹಾರಿದ ಮಗಳು

ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದ ತಂದೆ

 | 
ಪ್ರಾತಿನಿಧಿಕ ಚಿತ್ರ

ಬಾರ್ಮರ್: ಕೊರೋನಾ ಸೋಓಕಿನಿಂದ ಮೃತಪಟ್ಟ ತಂದೆಯ ಅಗಲಿಕೆಯಿಂದ ಮನನೊಂದ ಮಗಳು ತಂದೆ ಚಿತೆಗೆ ಹಾರಿರುವ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.

ದಾಮೋದರ್ ದಾಸ್ ಎಂಬ 73 ವರ್ಷದ ವ್ಯಕ್ತಿ ಕೊರೋನಾದಿಂದ ಸ್ಪತ್ರೆಯಲ್ಲಿ ಮೃತಪಟ್ಟದ್ದರು, ಅವರನ್ನು ಮೃತ ದೇಹವನ್ನು ದಹಿಸುವ ಸಮಯದಲ್ಲಿ ಮೃತ ವ್ಯಕ್ತಿಯ ತೃತಿಯ ಪುತ್ರಿಯಾದ ಮೂವತ್ತೆರಡು ವರ್ಷದ ಚಂದ್ರ ಶಾರದ ಧಗಧಗನೆ ಉರಯುತ್ತಿದ್ದ ಬೆಂಕಿಗಾರಿದ್ದಾಳೆ.

ಶಾರದ ಬೆಂಕಿಗಾರಿದ ತಕ್ಷಣೆ ಸ್ಥಳದಲ್ಲಿದ್ದ ಜನರು ಅವಳನ್ನು ಹರಸಾಹಸ ಪಟ್ಟು ಬೆಂಕಿಯಂದ ಹೊರ ತೆಗೆದು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದಾರೆ. ಶೇಖಡ ಶಾರದ ಅವರ ದೇ ಶೇಖಡ 70 ರಷ್ಟು ಸುಟ್ಟಿದ್ದು ಜೋದ್ಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಶಾರದ ದಾಮೋದರ ದಾಸ್ ಅವರ ತೃತಿಯ ಪುತ್ರಿ, ದಾಮೋದರ್ ದಾಸ್ ಅವರ ಪತ್ನಿ ಕೆಲವು ದಿನಗಳ ಹಿಂದೆ ತೀರಿಕೊಂಡಿದ್ದರು, ಈಗ ಶಾರದ ಬೆಂಕಿಗೆ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿದ್ದಾರೆ ಎಂದು ಕೊತ್ವಲಿ ಪೊಲೀಸ್ ಠಾಣೆಯ ಅಧಿಕಾರಿ ಪ್ರೇಮ್ ಪ್ರಕಾಶ್ ತಿಳಿಸಿದ್ದಾರೆ.