ಕೋವಿಡ್ ನಿಂದ ಸತ್ತವಳು 18 ದಿನಗಳ ನಂತರ ಅದ್ಹೇಗ್ ಬಂದಳು!

ಆಂಧ್ರಪ್ರದೇಶದಲ್ಲೊಂದು ವಿಚಿತ್ರದ ಘಟನೆ, ಗಿರಿಯಮ್ಮನನ್ನು ನೋಡಿ ದಂಗಾದ ಜನ

 | 
ಮುತ್ಯಾಲ ಗಿರಿಜಮ್ಮ ದುಖಃದಿಂದ ಮನೆಗೆ ತೆರಳಿದಾಗ:Photo

ಹೈದರಾಬಾದ್: ಮೇ 15ನೇ ತಾರೀಖು ಮುತ್ಯಾಲ ಗಡ್ಡಯ್ಯನ ಹೆಂಡತಿ ಪಿಪಿಇ ಕಿಟ್ ನಿಂದ ಸುತ್ತಿದ ಗಿರಿಜಮ್ಮನ ಮೃತದೇಹವನ್ನು ಅಂತಿಮ ಸಂಸ್ಕರ ಮಾಡಲಾಗಿತ್ತು, ಅವರು ಕೋವಿಡ್ ನಿಂದ ಮೃತಪಟ್ಟಿದ್ದರು, ಜೂನ್ 1ನೇ ತಾರೀಖಿನ ರಾತ್ರಿ ವೇಳೆ ಅವರ ಕುಟುಂಬಸ್ಥರು ಗಿರಿಜಮ್ಮನ ಸ್ಮರಣಾರ್ಥ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು, ಮಾರನೆಯ ದಿನೇ ಕುಟುಬಸ್ಥರಿಗೆ ಮತ್ತು ಗ್ರಾಮಸ್ಥರಿಗೆ ಆಶ್ಚರ್ಯ ಕಾದಿತ್ತು. 70 ವರ್ಷದ ಮಹಿಳೆ ಮರಳಿ ಮನೆಗೆ ದಾವಿಸಿದರು.

ಈ ರೀತಿಯ ವಿಚತ್ರ ಘಟನೆ ನಡೆದಿರುವುದು ಆಂಧ್ರಾದ ಕೃಷ್ಣ ಜಿಲ್ಲೆಯ ಜಗ್ಗೈಯಪೇಟ್ ಮಂಡಳದ ಕ್ರಿಶ್ಚಿಯನ್ ಪೇಟ್ ಗ್ರಾಮದಲ್ಲಿ. ಕೋವಿಡ್ ದೃಢಪಟ್ಟಿದ್ದ ಹಿನ್ನೆಲೆ ಚಿಕಿತ್ಸೆಗಾಗಿ ಮೇ.12 ನೇ ತಾರೀಖಿನಂದು ಮುತ್ಯಾಲ ಗಡ್ಡಯ್ಯನ ಹೆಂಡತಿ ಗಿರಿಯಮ್ಮನನ್ನು ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಗಡ್ಡಯ್ಯ ದಿನ ಆಸ್ಪತ್ರೆಗೆ ಹೋಗಿ ಹೆಂಡತಿ ಗಿರಿಯಮ್ಮನನ್ನು ನೋಡಿ ಬರುತ್ತಿದ್ದ. ಆದರೆ ಮೇ.15 ನೇ ತಾರೀಖು ಗಡ್ಡಯ್ಯನ ಹೆಂಡತಿ ಗಿರಿಯಮ್ಮ ಕೋವಿಡ್ ವಾರ್ಡ್ ನಲ್ಲಿ ಕಾಣಿಸಲಿಲ್ಲ. ಗಡ್ಡಯ್ಯ ಬೇರೆ ವಾರ್ಡ್ ಗಳಲ್ಲಿ ಹುಡುಕಿದರಾದರೂ ಅವರ ಹೆಂಡತಿ ಎಲ್ಲಿಯೂ ಸಿಗಲಿಲ್ಲ. ಈ ಹಿನ್ನೆಲೆ ಗಡ್ಡಯ್ಯ ನರ್ಸ್ ಗಳನ್ನು ಕೇಳಿದ್ದು, ನರ್ಸ್ ಗಳು ಗರಿಯಮ್ಮ ಸತ್ತಿರಬಹುದು ಎಂದು ತಿಳಿಸಿದ್ದಾರೆ.

ಆಸ್ಪತ್ರೆಯ ಸವಾಗಾರದಲ್ಲಿ ಪಿಪಿಇ ಕಿಟ್ ನಿಂದ ಸುತ್ತಲಾಗಿದ್ದ ಹಿರಿಯ ಮಹಿಳೆಯ ಶವವನ್ನು ಗಡ್ಡಯ್ಯನಿಗೆ ಹಸ್ತಾಂತರಿಸಿದ್ದಾರೆ. ದುಖಿಃತಪ್ತನಾದ ಗಡ್ಡಯ್ಯ ತನ್ನ ಗ್ರಾಮಕ್ಕೆ ಶವವನ್ನು ತಂದು ಅಂತಿಮ ಸಂಸ್ಕಾರ ನಡೆಸಿದ್ದಾರೆ. ಕೆಲ ದಿನಗಳ ನಂತರ 23ನೇ ತಾರೀಖಿನಂದು ಮುತ್ಯಾಲ ಗಡ್ಡಯ್ಯನ ಮಗ 35 ವರ್ಷದ ಮುತ್ಯಾಲ ರಮೇಶ್ ಖಮ್ಮಮ್ ಜಿಲ್ಲಾಸ್ಪತ್ರೆಯಲ್ಲಿ ಸತ್ತಿದ್ದಾನೆ ಎಂದು ಸುದ್ದಿ ತಿಳಿದು ಅದನ್ನು ಅಂತಿಮ ಸಂಸ್ಕಾರ ನಡೆಸಲಾಗಿತ್ತು.

ಶೋಕದಲ್ಲಿ ಮೊಳಗಿದ್ದ ಕುಟುಂಬಸ್ಥರು ಗಿರಿಜಮ್ಮ ಮತ್ತು ರಮೇಶ್ ಅವರ ಸ್ಮರಣಾರ್ಥ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಾರನೆಯ ದಿನವೇ ಗಿರಿಜಮ್ಮ ಮನೆಗೆ ಬಂದು ಆಶ್ಚರ್ಯ ಮೂಡಿಸಿದ್ದಾಳೆ. ಮನೆಗೆ ಬಂದ ಗಿರಿಜಮ್ಮ ನಾನು ಗುಣಮುಖವಾದ ನಂತರ ಯಾರೂ ನನ್ನನ್ನು ಕರೆದುಕೊಂಡು ಬರಲು ಆಸ್ಪತ್ರಗೆ ಬರಲಿಲ್ಲ ದುಖಃ ಮತ್ತು ನಿರಾಶೆ ವ್ಯಕ್ತಪಡಿಸಿದ್ದಾರೆ. ಹಾಗೆ ಆಸ್ಪತ್ರೆ ಮನೆಗೆ ತೆರಳಲು 3 ಸಾವಿರ ರೂಪಾಯಿಗಳನ್ನು ನೀಡಿದೆ ಎಂದು ಆಕೆ ತಿಳಿಸಿದ್ದಾಳೆ.

ಕೋವಿಡ್ ಸೋಂಕಿನ ಭಯದಿಂದ ಪಿಪಿಇ ಕಿಟ್ ನಿಮದ ಸುತ್ತಲಾಗಿದ್ದ ಶವವನ್ನು ಸರಿಯಾಗಿ ಗಮನಿಸದೆ ಬೇಗನೇ ಅಂತಿಮ ಸಂಸ್ಕಾರ ಮಾಡಲಾಯ್ತು ಎಂದು ಕುಟುಂಬದ್ಥರು ಮತ್ತು ಗ್ರಾಮಸ್ಥರು ಹೇಳಿದ್ದಾರೆ. ಈ ತಪ್ಪಿನ ಬಗ್ಗೆ ವಿಜಯವಾಡ್ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.