ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಟಿಎಸ್‌ಆರ್‌ಟಿಸಿಯ ಕ್ರಮ
ಸಂಜೆ 7:30 ರಂತರ ಮಹಿಳೆಯರಿಗೆ ಕೋರಿದಲ್ಲಿ ಬಸ್ ನಿಲ್ಲುವ ಸೇವೆ
Jul 9, 2021, 11:49 IST
| 
ಹೈದರಾಬಾದ್: ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ತೆಲಂಗಾಣದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ದಿಟ್ಟ ಕ್ರಮವೊಂದನ್ನು ಕೈಗೊಂಡಿದೆ.
ಹೈದರಾಬಾದ್ ನಗರದಲ್ಲಿ ಟಿಎಸ್‌ಆರ್‌ಟಿಸಿಯ ಎಲ್ಲಾ ಬಸ್ ಗಳು ಸಂಜೆ 7:30 ರ ನಂತರ ಮಹಿಳೆಯರು ಕೋರಿದಲ್ಲಿ ಬಸ್ ನಿಲ್ಲಿಸುವಂತೆ ಆದೇಶ ಹೊರಡಿಸಿದೆ. ರಾತ್ರಿ ವೇಳೆ ಮಹಿಳಾ ಸುರಕ್ಷತೆಗಾಗಿ ನಿಯಮವೊಂದನ್ನು ಜಾರಿಗೆ ತರಲಾಗಿದೆ.
ಸಂಜೆ ಸಮಯದಲ್ಲಿ ಮಹಿಳೆಯರು ಎಲ್ಲಿ ಬೇಕಾದರೂ ಬಸ್ ಹತ್ತಬಹುದು ಮತ್ತು ಎಲ್ಲಿ ಬೇಕಾದರೂ ಇಳಿಯಬಹುದಾಗಿದೆ. ಇಳಿಯಲು ಮತ್ತು ಹತ್ತಲು ಅವರಿಗೆ ಬಸ್ ನಿಲ್ದಾಣಗಳ ಅಗತ್ಯವಿಲ್ಲ. ಪ್ರಸ್ತುತ ಈ ಕ್ರಮವನ್ನು ಹೈದರಾಬಾದ್ ನಲ್ಲಿ ಜಾರಿಗೆ ತರಲಾಗಿದೆ.
ಬಸ್ ಚಾಲಕ ಅಥವಾ ಕಂಡಕ್ಟರ್ ನಿಯಮಗಳನ್ನು ಪಾಲಿಸದಿದ್ದರೆ, ಪ್ರಯಾಣಿಕರು ಡಿಪೋ ವ್ಯವಸ್ಥಾಪಕರನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ.