IPL ಮೆಗಾ ಹರಾಜು: ಇಶಾನ್ ಕಿಶನ್ ಗೆ 15.25 ಕೋಟಿ!
8.5ಕೋಟಿಗೆ ಪಂಜಾಬ್ ಪಾಲದ ಶಿಖರ್ ಧವನ್
ಮೂವರೇ ಅಟಗಾರರಿಗೆ 30ಕೋಟಿ ಖರ್ಚು ಮಾಡಿದ ಅರ್ ಸಿಬಿ
ಕರ್ನಾಟಕದ ಪ್ರಸಿದ್ಧ್ ಕೃಷ್ಣ RR ತಂಡಕ್ಕೆ 10.25 ಕೋಟಿ ರೂಪಾಯಿಗೆ ಬಿಕರಿ
ಕ್ರಿಕೆಟ್ ಹಬ್ಬವೆಂದೇ ಖ್ಯಾತಿಯಾಗಿರುವ IPL ನ 15 ನೇ ಆವೃತ್ತಿಯ ಮೊದಲ ದಿನದ ಹರಾಜು ಪ್ರಕ್ರಿಯೆ ಬೆಂಗಳೂರಿನಲ್ಲಿ
ನಡೆದಿದೆ. ಮೆಗಾ ಹರಾಜಿನಲ್ಲಿ ಒಟ್ಟು 600 ಆಟಗಾರರ ಹೆಸರು ಹರಾಜು ನೋಂದಣಿಯಾಗಿದೆ. ಮೊದಲ ದಿನ 166 ಅಟಗಾರರು ಹರಾಜುಗೊಂಡಿದ್ದಾರೆ. ಈ ಭಾರಿಯು ಹೊಸ ಹಾಗೂ ಯುವ ಪ್ರತಿಭೆಗಳಿಗೆ ಫ್ರಾಂಚೈಸಿಗಳು ಮಣೆ ಹಾಕಿದ್ದು, ಅನುಭವಿ ಅಟಗಾರರು ಮೂಲಬೆಲೆಗೂ ಮಾರಾಟಗೊಳ್ಳದೆ ಇರುವುದು ಅಚ್ಚರಿ ತಂದಿದೆ.
23ರ ಪೋರ ಇಶಾನ್ ಕಿಶನ್ ರನ್ನು ಬರೊಬ್ಬರೀ 15.25 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಖರೀದಿ ಮಾಡಿದ್ದು ಅತೀ ದುಬಾರಿ ಅಟಗಾರ ಎನಿಸಿದ್ದಾರೆ. ಶ್ರೆಯಸ್ ಅಯ್ಯರ್ ಕೊಳ್ಳಲು ಸಹ ಫ್ರಾಂಚೈಸಿಗಳು ಮುಗಿಬಿದಿದ್ದು , ಅಯ್ಯರ್ 12.25ಕೋಟಿಗೆ ಕೆಕೆಅರ್ ತಂಡಕ್ಕೆ ಬಿಕರಿಯಾದರು. ಇನ್ನೂ ಆರ್ ಸಿಬಿ ತಂಡವು, ವನಿಂದು ಹಸರಂಗಾ 10.75 ಕೋಟಿ, ಪಾಫ್ ಡು ಪ್ಲೆಸಿಸ್ ಗೆ 7 ಕೋಟಿ
, ಹರ್ಷಲ್ ಪಟೇಲ್ ಗೆ 10.75 ಕೋಟಿ ನೀಡೀ ಖರೀದಿ ಮಾಡಿತು.
ಅಟಗಾರರ ಹರಾಜಿನ ಕಂಪ್ಲೀಟ್ ಡೀಟೇಲ್ಸ್:
1.ಶಿಖರ್ ಧವನ್ - ಪಂಜಾಬ್ ಕಿಂಗ್ಸ್ - 8.5 ಕೋಟಿ
2.ಆರ್.ಅಶ್ವಿನ್ -ರಾಜಸ್ಥಾನ ರಾಯಲ್ಸ್ - 5 ಕೋಟಿ
3.ಪ್ಯಾಟ್ ಕಮಿನ್ಸ್ -ಕೊಲ್ಕತ್ತಾ ನೈಟ್ ರೈಡರ್ಸ್ -7.25 ಕೋಟಿ
4.ಕಗಿಸೋ ರಬಾಡ - ಪಂಜಾಬ್ ಕಿಂಗ್ಸ್ -9.25 ಕೋಟಿ
5.ಟ್ರೆಂಟ್ ಬೌಲ್ಟ್ -ರಾಜಸ್ಥಾನ ರಾಯಲ್ಸ್ - 8 ಕೋಟಿ
6.ಶ್ರೇಯಸ್ ಅಯ್ಯರ್ -ಕೊಲ್ಕತ್ತಾ ನೈಟ್ ರೈಡರ್ಸ್ -12.25 ಕೋಟಿ
7.ಮೊಹಮ್ಮದ್ ಶಮಿ - ಗುಜರಾತ್ ಟೈಟಾನ್ಸ್ -6.25 ಕೋಟಿ
8.ಫಾಫ್ ಡುಪ್ಲಸಿಸ್ - ರಾಯಲ್ ಚಾಲೆಂಜರ್ಸ್ ಬೆಂಗಳೂರು -7 ಕೋಟಿ
9.ಕ್ವಿಂಟನ್ ಡಿ ಕಾಕ್- ಲಕ್ನೋ ಸೂಪರ್ ಜೈಂಟ್ಸ್ -6.75 ಕೋಟಿ
10.ಡೇವಿಡ್ ವಾರ್ನರ್- ಡೆಲ್ಲಿ ಕ್ಯಾಪಿಟಲ್ಸ್ -6.25 ಕೋಟಿ
11.ಶಿಮ್ರಾನ್ ಹೆಟ್ಮಯಾರ್- ರಾಜಸ್ಥಾನ್ ರಾಯಲ್ಸ್-8.50ಕೋಟಿ
12.ದೇವದತ್ ಪಡಿಕ್ಕಲ್- ರಾಜಸ್ಥಾನ್ ರಾಯಲ್ಸ್- 7.75 ಕೋಟಿ
13.ಡ್ವೇನ್ ಬ್ರಾವೋ- ಚೆನೈ ಸೂಪರ್ ಕಿಂಗ್ಸ್-4.40ಕೋಟಿ
14.ಜೇಸನ್ ಹೋಲ್ಡರ್-ಲಕ್ನೋ ಸೂಪರ್ ಜೈಂಟ್ಸ್ -8.75 ಕೋಟಿ
15.ಹರ್ಶಲ್ ಪಟೇಲ್-ರಾಯಲ್ ಚಾಲೆಂಜರ್ಸ್ ಬೆಂಗಳೂರು -10.75ಕೋಟಿ
16.ದೀಪಕ್ ಹೂಡಾ-ಲಕ್ನೋ ಸೂಪರ್ ಜೈಂಟ್ಸ್ -5.75 ಕೋಟಿ
17.ಹಸರಂಗ-ರಾಯಲ್ ಚಾಲೆಂಜರ್ಸ್ ಬೆಂಗಳೂರು -10.75ಕೋಟಿ
18ವಾಷಿಂಗ್ಟನ್ ಸುಂದರ್-ಸನ್‌ರೈಸರ್ಸ್ ಹೈದರಬಾದ್- 8.75ಕೋಟಿ
19.ಕೃಣಾಲ್ ಪಾಂಡ್ಯ-ಲಕ್ನೋ ಸೂಪರ್ ಜೈಂಟ್ಸ್ -8.25 ಕೋಟಿ
20.ಮಿಚೇಲ್ ಮಾರ್ಶ್-ಡೆಲ್ಲಿ ಕ್ಯಾಪಿಟಲ್ಸ್ -6.50 ಕೋಟಿ
21ಅಂಬಟಿ ರಾಯುಡು- ಚೆನೈ ಸೂಪರ್ ಕಿಂಗ್ಸ್-6.75ಕೋಟಿ
22.ಇಶಾನ್ ಕಿಶನ್-ಮುಂಬೈ ಇಂಡಿಯನ್ಸ್-15.25ಕೋಟಿ
23.ಜಾನಿ ಬೆರ್‌ಸ್ಟೋ-ಪಂಜಾಬ್ ಕಿಂಗ್ಸ್ -6.75 ಕೋಟಿ
ದೀಪಕ್ ಚಾಹರ್-ಚೆನೈ ಸೂಪರ್ ಕಿಂಗ್ಸ್-14ಕೋಟಿ
24.ಪ್ರಸಿದ್ದ್ ಕೃಷ್ಣ-ರಾಯಲ್ ಚಾಲೆಂಜರ್ಸ್ ಬೆಂಗಳೂರು -10ಕೋಟಿ
25.ಜೋಶ್ ಹೆಜಲ್‌ವುಡ್-ರಾಯಲ್ ಚಾಲೆಂಜರ್ಸ್ ಬೆಂಗಳೂರು -7.75ಕೋಟಿ
26.ಮಾರ್ಕ್ ವುಡ್ - ಲಕ್ನೋ ಸೂಪರ್ ಜೈಂಟ್ಸ್- 7.50 ಕೋಟಿ
27.ಭುವನೇಶ್ವರ್ ಕುಮಾರ್ -ಸನ್‌ರೈಸರ್ಸ್ ಹೈದರಬಾದ್-4.20ಕೋಟಿ
28.ಶಾರ್ದೂಲ್ ಠಾಕೂರ್-ಡೆಲ್ಲಿ ಕ್ಯಾಪಿಟಲ್ಸ್ -10.75 ಕೋಟಿ
29.ಮುಸ್ತಫಿಜರ್ ರೆಹಮಾನ್-ಡೆಲ್ಲಿ ಕ್ಯಾಪಿಟಲ್ಸ್ -10.75 ಕೋಟಿ
30.ರಾಹುಲ್ ಚಾಹರ್-ಪಂಜಾಬ್ ಕಿಂಗ್ಸ್ -5.25 ಕೋಟಿ
31.ಯಜುವೇಂದ್ರ ಚಾಹಲ್-ರಾಜಸ್ಥಾನ್ ರಾಯಲ್ಸ್- 6.50 ಕೋಟಿ