ಯಾರಗ್ತಾರೆ ಅರ್ ಸಿಬಿ ಕ್ಯಾಪ್ಟನ್?

ನಾಯಕನಾಗಿ  ಸತತ ವೈಫ‌ಲ್ಯ ಅನುಭವಿಸಿದ ವಿರಾಟ್‌ ಕೊಹ್ಲಿ ಕಳೆದ ವರ್ಷವೇ ಸ್ವತಃ ಕ್ಯಾಪ್ಟನ್ಸಿಯಿಂದ ಹಿಂದೆ ಸರಿದ್ದಿದ್ದರು.ಕ್ಯಾಪ್ಟನ್ಸಿ ಒತ್ತಡದಿಂದ ಬ್ಯಾಟಿಂಗ್ನಲ್ಲೂ ಸಹ ವೈಫಲ್ಯ ಅನುಭವಿಸುತ್ತಿದ್ದ ವಿರಾಟ್ ತಮ್ಮ ರನ್ ಬರ ನೀಗಿಸಲು ಅರ್ ಸಿಬಿ ಸೇರಿದಂತೆ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ನಾಯಕ ಸ್ಥಾನದಿಂದ ಕೆಳಗಿಳಿದರು.ಇನ್ನೂ ಕೋಹ್ಲಿ ನಂತರ ಮಿ.360 ಎಬಿಡಿ ಅರ್ ಸಿಬಿ ತಂಡದ ಕಫ್ತಾನ ಅಗಲಿದ್ದಾರೆ ಎಂಬ ನೀರಿಕ್ಷೆ ಇತ್ತು.ಅದರೆ ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್ ಗೆ ನೀವೃತ್ತಿ ಘೋಷಿಸಿ ಶಾಕ್ ನೀಡಿದರು.
 | 
rcb

ಕಪ್ ಗೆಲ್ಲಿಸಿಕೊಡುವ ಕಫ್ತಾನ ಯಾರು?

ಕ್ಯಾಪ್ಟ್ ನ್ ರೇಸ್ ನಲ್ಲಿ ಮ್ಯಾಕ್ಸಿ, ಪ್ಲೆಸಿಸ್, ಕಾರ್ತಿಕ್!

ಐಪಿಎಲ್ ಅರಂಭದಿದಂದಲೂ ಒಮ್ಮೆಯೂ ಚಾಂಪಿಯನ್‌ ಪಟ್ಟ ಅಲಂಕರಿಸದೇ ಹೋದರೂ, ಈ ಸಲ ಕಪ್ ನಮ್ದೆ ಎಂಬ ವಿಶ್ವಾಸದಿಂದ ಮತ್ತೋಮ್ಮೆ ಅಂಗಳಕ್ಕೆ ಇಳಿದು ಕಪ್ ಎತ್ತಿ ಹಿಡಿಯಲು ಅರ್ ಸಿಬಿ ತಂಡ ಅಣಿಯಾಗಿದೆ. ಅದಕ್ಕಾಗಿಯೇ ಕೋಟಿ-ಕೋಟಿ ಹಣ ಚೆಲ್ಲಿ ಪಾಫ್ ಡುಪ್ಲೆಸಿಸ್, ವನಿಂದು ಹಸರಂಗ, ಜೋಶ್‌ ಹ್ಯಾಝಲ್‌ವುಡ್‌, ಹರ್ಷಲ್‌ ಪಟೇಲ್‌ ರಂತ ಟಿ20ತಜ್ಞ ಅಟಗಾರರನ್ನು ಕೊಂಡುಕೊಂಡಿದೆ. ಅದರೆ ಕೋಹ್ಲಿ ನಂತರ ತಂಡಕ್ಕೆ ನಾಯಕನಾಗಿ ಯಾರು  ಕಪ್ ಗೆಲ್ಲಿಸಿ ಕೊಡ್ತಾರೇಂಬುದೇ ಅರ್ ಸಿಬಿ ಅಭಿಮಾನಿಗಳಲ್ಲಿ ಸದ್ಯಕ್ಕೆ ಎದ್ದಿರುವ ಪ್ರಶ್ನೆ. 


 ಈ ಭಾರಿ ಕಪ್ ಗೆಲ್ಲಲೇಬೇಕೇಂದು ಹಠಕ್ಕೆ ಬಿದ್ದಿರುವ ಅರ್ ಸಿಬಿ ತಂಡದ ನಾಯಕ ಸ್ಥಾನಕ್ಕೆ ಪ್ರಮುಖವಾಗಿ 3 ಹೆಸರುಗಳು ಕೇಳಿ ಬರ್ತೀವೇ. ಅವು ಇಂತಿವೆ


ಪಾಫ್ ಡು ಪ್ಲೆಸಿಸ್‌?


ಡು ಪ್ಲೆಸಿಸ್‌ ಆರ್‌ಸಿಬಿಯ ನೂತನ ನಾಯಕನಾಗುವ ಸಾಧ್ಯತೆಯನ್ನು ಮುಖ್ಯ ಕೋಚ್ ಸಂಜಯ್ ಬಂಗಾರ್ ತೆರೆದಿರಿಸಿದ್ದಾರೆ. ಪಾಫ್ ಡು ಪ್ಲೆಸಿಸ್‌ ಸೇರ್ಪಡೆಯಿಂದ ತಂಡದ ಬ್ಯಾಟಿಂಗ್‌ ವಿಭಾಗ  ಬಲಿಷ್ಠಗೊಂಡಿದೆ, ಇವರ ಅಗಮನದಿಂದ ಅಗ್ರ ಕ್ರಮಾಂಕಕ್ಕೆ ಹೆಚ್ಚಿನ ಬಲ ಸಿಕ್ಕಿದೆ. ಡು ಪ್ಲೆಸಿಸ್ ಕೇವಲ ಬ್ಯಾಟಿಂಗ್ ಅಷ್ಟೇ ಅಲ್ಲ, ನಾಯಕತ್ವದ ಕೌಶಲ್ಯವೂ  ಅವರಲ್ಲಿದೆ ಎಂದು, ಈಗಾಗಲೇ ಸಂಜಯ್‌ ಬಂಗಾರ್‌ ಅನಿಸಿಕೆ ವ್ಯಕ್ತಪಡಿಸಿದ್ದು ನಾಯಕನಾಗಿ ಸೌತ್ ಅಫ್ರಿಕಾ ತಂಡವನ್ನು ಮುನ್ನಡೆಸಿರುವ ಅನುಭವ ಸಹ ಪ್ಲೆಸಿಸ್ ಬೆನ್ನಿಗಿದೆ. ಈಗಾಗಿ ನಾಯಕ ಸ್ಥಾನಕ್ಕೆ ಮೊದಲ ಅಯ್ಕೆಯಾಗಿ ಪ್ಲೇಸಿಸ್ ಎದುರಿಗಿದ್ದಾರೆ.


ಮ್ಯಾಕ್ಸ್ ವೇಲ್?


ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಗ್ಲೆನ್ ಮ್ಯಾಕ್ಸ್ ವೆಲ್ ಅರ್ ಸಿಬಿಯ ನಾಯಕ ಸ್ಥಾನಕ್ಕೆ ಎರಡನೇ ಅಯ್ಕೆಯಾಗಿದ್ದಾರೆ. ಅವರನ್ನು  ಹರಾಜಿನ ಮೊದಲೇ ಆರ್ ಸಿಬಿ ರಿಟೇನ್ ಮಾಡಿಕೊಂಡಿದೆ. ಕಳೆದ ಋತಿವಿನಲ್ಲಿ ಮ್ಯಾಕ್ಸಿ ಅರ್ ಸಿಬಿ ಪರ ಹೆಚ್ಚು ರನ್ ಗಳಿಸಿದ ಅಟಗಾರ ಅಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಿಯೂ ಅವರು 15 ಪಂದ್ಯಗಳಿಂದ 513 ರನ್ ಕಲೆಹಾಕಿದ್ದಾರೆ. ಹೀಗಾಗಿ, ಅವರು ಬ್ಯಾಟಿಂಗ್ ಮತ್ತು ಆಲ್​ರೌಂಡರ್ ಶಕ್ತಿಯಾಗಿ ಆರ್​ಸಿಬಿ ತಂಡದಲ್ಲಿ ಆಟವಾಡ್ತಿದ್ದು, ಇದರೊಂದಿಗೆ ನಾಯಕತ್ವ ನೀಡಿದರೆ ನಿಭಾಯಿಸುವ ಶಕ್ತಿ ಮ್ಯಾಕ್ಸಿಗಿದೆ ಎನ್ನುತ್ತಾರೆ ಕ್ರಿಕೆಟ್ ಅಭಿಮಾನಿಗಳು. ಇದಲ್ಲದೆ ಇನ್ನೂ3-4 ವರ್ಷ ಮ್ಯಾಕ್ಸಿ ಅರ್ ಸಿಬಿ ತೊರೆಯದ ಕಾರಣ ಧೀರ್ಘಕಾಲಿಕ ಯೋಚನೆಯಾಗಿ ಮ್ಯಾಕ್ಸಿಯನ್ನು ಕಫ್ತಾನ ಪಟ್ಟಕ್ಕೆ ಕುರಿಸಬಹುದು.


ದಿನೇಶ್ ಕಾರ್ತಿಕ್?

ಅರ್ ಸಿಬಿ ತಂಡಕ್ಕೆ ಮರಳಿ ಬಂದಿರುವ ಕಾರ್ತಿಕ್ ನಾಯಕನಾಗಬಹುದು ಎಂದು ಕೆಲವರು ಅಭಿಪ್ರಾಯ ಕೆಲವರದ್ದು. ಅದರೆ ಕಳೆದ ವರ್ಷ ಕಾರ್ತಿಕ್ ಕೋಲ್ಕಾತ್ತಾ ತಂಡದಲ್ಲಿದ್ದಾಗ ನಾಯಕ ಸ್ಥಾನದ ಒತ್ತಡ ನಿಭಾಯಿಸಲಾಗದೆ  ಕೆಳಗಿಳಿದ್ದಿದ್ದರು. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಮ್ಯಾಚ್ ಫಿನಿಷರ್ ಅಗುವ ಜವಾಬ್ದಾರಿ ಸಹ ಕಾರ್ತಿಕ್ ಹೆಗಲಿಗಿದೆ. ಈಗಾಗಿ ಅವರ ಕ್ಯಾಪ್ಟನ್ ಅಗುವ ಸಾಧ್ಯತೆ ಕಡಿಮೆ ಇದೆ.


ಅರ್ ಸಿಬಿ ತಂಡ:


ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡುಪ್ಲೆಸಿಸ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ ವುಡ್, ಶಹಬಾಜ್ ಅಹ್ಮದ್, ಅನೂಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಆಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್‌ ಪ್ರಭುದೇಸಾಯ್, ಚಮ ಮಿಲಿಂದ್, ಅನೀಶ್ವರ್‌ ಗೌತಮ್, ಕರಣ್‌ ಶರ್ಮಾ, ಸಿದ್ಧಾರ್ಥ್ ಕೌಲ್, ಡೇವಿಡ್ ವಿಲ್ಲಿ, ಲವ್ನೀತ್ ಸಿಸೋಡಿಯಾ.