ರೊನಾಲ್ಡೋ ಒಂದೇ ಮಾತಿಗೆ ಕೊಕಾ ಕೋಲಾಗೆ 4 ಬಿಲಿಯನ್ ಡಾಲರ್ ನಷ್ಟ

ರೊನಾಲ್ಡೋ ಹಾದಿಯನ್ನೇ ಹಿಡಿದ ಫ್ರೆಂಚ್ ಆಟಗಾರ ಹೈನ್ಕೈನ್ ದೂರ ಇಟ್ಟ ಪೋಗ್ಬಾ

 | 
Ronaldo

ಪೋರ್ಚುಗಲ್ ಫುಟ್ ಬಾಲ್ ಆಟಗಾರ ಕ್ರಿಶ್ಚಿಯಾನೋ ರೊನಾಲ್ಡೋ ಪ್ರೆಸ್ ಮೀಟ್ ಒಂದರಲ್ಲಿ ಕೊಕಾ ಕೋಲಾ ಬಗ್ಗೆ ಹೇಳಿದ ಒಂದೇ ಒಂದು ಮಾತಿಗೆ ಕೊಕಾ ಕೋಲಾಗೆ ಬಾರೀ ಹೊಡೆತ ಬಿದ್ದಿದೆ.

ಯುರೋಪ್ ನಲ್ಲಿ ಯುರೋ ಕಪ್ 2020 ಫುಟ್ ಬಾಲ್ ಚಾಂಪಿಯನ್ ಶಿಪ್ ನಡೆಯುತ್ತಿದ್ದು, ಹಂಗೇರಿ ವಿರುದ್ಧ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡುಲು ಬಂದ ಪೋರ್ಚುಗಲ್ ನಾಯಕ ರೊನಾಲ್ಡೋ, ಟೇಬಲ್ ಮೇಲೆ ಇಡಲಾಗಿದ್ದ ಎರಡು ಬಾಟಲ್ ಕೊಕಾ ಕೋಲಾ ಮತ್ತು ನೀರಿನ ಬಾಟಲಿಯನ್ನು ಗಮನಿಸಿದರು.

ಸುದ್ದಿಗೋಷ್ಟಿಗೆ ಕುಳಿತುಕೊಂಡ ತಕ್ಷಣವೇ ಕಾರ್ಯಪ್ರವೃತ್ತರಾದ ರೊನಾಲ್ಡೋ ಟೇಬಲ್ ಮೇಲೆ ಇಡಲಾಗಿದ್ದ ಕೊಕಾ ಕೋಲಾದ ಎರಡೂ ಬಾಟಲಿಯನ್ನು ತೆಗೆದು ಪಕ್ಕಕ್ಕೆ ಇಟ್ಟರು. ನೀರಿನ ಬಾಟಲಿಯನ್ನು ಕೈಯಲ್ಲಿ ಹಿಡಿದು “ನೀರು ಕುಡಿದು ಆರೋಗ್ಯವಾಗಿರಿ” ಎಂದು ಹೇಳಿದರು.

ಸುದ್ದಿಗೋಷ್ಟಿಯ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಕಾರ್ಬೋನೇಟ್ ಮಿಶ್ರಿತ ಪಾನಿಯಗಳಿಗಿಂತ ನೀರು ಉತ್ತಮ ಎಂಬುದು ರೊನಾಲ್ಡೋ ಆವರ ಮಾರ್ಮಿಕ ನುಡಿಯಾಗಿದ್ದು, ಇವರ ಹೇಳಿಕೆಯ ನಂತರ ಕೊಕಾ ಕೋಲಾ ಕಂಪನಿಯ ಷೇರು ಬಾರಿ ಕುಡಿತ ಕಂಡಿದೆ. ಇದರಿಂದ ಕೊಕಾ ಕೋಲಾ ಕಂಪನಿಗೆ 4 ಬಿಲಿಯನ್ ಡಾಲರ್ ಅಂದರೆ ಸುಮಾರು 29ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ತಿಳಿದು ಬಂದಿದೆ.  

ಹಾಗೆ ಕ್ರಿಶ್ಚಿಯಾನೋ ರೊನಾಲ್ಡೋ ಅವರ ಹಾದಿಯನ್ನೇ ಅನುಸರಿಸಿರುವ ಫ್ರೆಂಚ್ ಫುಟ್ ಬಾಲ್ ಆಟಗಾರ ಪಾಲ್ ಪೋಗ್ಬಾ ಪ್ರೆಸ್ ಮೀಟ್ ವೇಳೆ ಟೇಬಲ್ ಮೇಲಿದ್ದ ಹೈನ್ಕೈನ್ ಬಾಟಲಿಯನ್ನು ತೆಗೆದು ಕೆಳಗಿಟ್ಟಿದ್ದಾರೆ. ಹೈನ್ಕೈನ್ ಕೂಡ ಟೂರ್ನಿಯಲ್ಲಿ ಪ್ರಾಯೋಜಕತ್ವ ಪಡೆದಿದೆ.