ಕೋವಿಡ್ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ ಪಾಂಡ್ಯ ಬರ್ದರ್ಸ್

ಆಕ್ಸಿಜನ್ ಕಾನ್ಸೆಂಟ್ರೇಟರ್ ಗಳನ್ನು ನೀಡಲು ಮುಂದಾದ ಪಾಂಡ್ಯ ಸಹೋದರು

 | 
Pandya Brothers

ಮುಂಬೈ: ಭಾರತ ಕ್ರಿಕೆಟ್ ತಂಡದ ಆಟಗಾರರಾದ ಪಾಂಡ್ಯ ಬ್ರದರ್ಸ್ ಕೊರೋನಾ ವಿರುದ್ಧದ ಹೋರಾಟಕ್ಕೆ ತಮ್ಮ ಕೈಲಾದ ಸೇವೆಯನ್ನು ಮಾಡುತ್ತಿದ್ದಾರೆ. ಈಗ ಕೋವಿಡ್ ರೋಗಿಗಳಿಗೆ ಹೊಸ ಆಕ್ಸಿಜನ್ ಕಾನ್ಸೆಂಟ್ರೇಟರ್ಗಳನ್ನು ನೀಡುತ್ತಿರುವುದಾಗಿ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ತಿಳಿಸಿದ್ದಾರೆ.

ಹೊಸ ವೈದ್ಯಕೀಯ ಪಕರಣಗಳನ್ನು ಕೋವಿಡ್ ಸೆಂಟರ್ ಗಳಿಗೆ ನೀಡುತ್ತಿರುವ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಹಾರ್ದಿಕ್ ಮತ್ತು ಕೃನಾಲ್ ಪಾಂಡ್ಯ, ಕೊರೋನಾಗೆ ತುತ್ತಾದವರು ಬೇಗನೆ ಗುಣಮುಖರಾಗಲೆಂದು ಹಾರೈಸಿದ್ದಾರೆ.

ಕೃನಾಲ್ ಮತ್ತು ಹಾರ್ದಿಕ್ ಪಾಂಡ್ಯ ಕೊರೋನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಸಮಸ್ಯೆ ತಲೆದೂರಿದ ಮೊದಲು ಸಹ 200 ಆಕ್ಸಿಜನ್ ಕಾನ್ಸೆಂಟ್ರೇಟರ್ ಉಪಕರಣಗಳನ್ನು ಗ್ರಾಮೀಣ ಬಾರತಕ್ಕೆಂದು ದೇಣಿಗೆ ನೀಡಿ ಸಹಾಯ ಮಾಡಿದ್ದರು. ಈಗ ಮತ್ತೆ ವೈದ್ಯಕೀಯ ಪಕರಣಗಳನ್ನು ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

http://