ಕೋವಿಡ್ ಹೋರಾಟಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಸಹಾಯ

30 ಕೋಟಿ ರೂಪಾಯಿ ಧನ ಸಹಾಯ ನೀಡುವುದಾಗಿ ಘೋಷಣೆ

 | 
ಕೋವಿಡ್ ಹೋರಾಟಕ್ಕೆ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಸಹಾಯ

ಚೆನ್ನೈ: ಮಹಾಮಾರಿ ಕೊರೋನಾ ಎರಡನೇ ಅಲೆ ವಿರುದ್ಧ ಹೋರಾಟ ನಡೆಸುತ್ತಿರುವ ಜನರ ಸಹಾಯಕ್ಕೆ ಸನ್ ರೈಸರ್ಸ್ ಹೈದರಾಬಾದ್ ಐಪಿಎಲ್ ತಂಡ ಬಂದಿದೆ. ಕೋವಿಡ್ ವಿರುದ್ಧ ಹೋರಾಡಲು ಸನ್ ರೈಸರ್ಸ್ ಹೈದರಾಬಾದ್ 30 ಕೋಟಿ ನಿಡುವುದಾಗಿ ಟ್ವೀಟ್ ಮೂಲಕ ತಿಳಿಸಿದೆ. ಈ ಹಣವನ್ನು ತಂಡದ ಸ್ವಾಮ್ಯ ಹೊಂದಿರುವ ಸನ್ ಟಿವಿ ನೆಟ್ವರ್ಕ್ ನೀಡಲಿದೆ ಎಂದು ಹೇಳಿದೆ.

ಸನ್ ರೈಸರ್ಸ್ ಹೈದರಾಬಾದ್ ನೀಡಲಿರುವ ಹಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸುವ ಪ್ರತ್ಯೇಕ ಸಂಸ್ಥೆಗಳಿಗೆ ನೀಡಲಾಗುವುದು ಮತ್ತು ಕೋವಿಡ್ ಸಮಯದಲ್ಲಿ ಪರಿಹಾರ ಕಾರ್ಯಕೈಗೊಳ್ಳುತ್ತಿರುವ ಸರ್ಕಾರೇತರ ಸಂಸ್ಥೆಗಳಿಗೆ ನೀಡಲಾಗುತ್ತದೆ. ಹಾಗೆ, ಸನ್ ನೆಟ್ವರ್ಕ್ ತನ್ನ ಮಧ್ಯಮದ ಮೂಲಕ ಕೊರೋನಾ ವಿರುದ್ಧ ಜಾಗೃತಿ ಮೂಡಿಸಲು ಹೆಚ್ಚು ಒತ್ತು ನೀಡಲಿದೆ ಎಂದು ಸನ್ ನೆಟ್ವರ್ಕ್ ಹೇಳಿದೆ.

ಸನ್ ನೆಟ್ವರ್ಕ್ ನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುವ ಸುಮಾರು ಆರು ಸಾವಿರ ಕೆಲಸಗಾರರು ತಮ್ಮ ಒಂದು ದಿನದ ವೇತನವನ್ನು ದಾನ ಮಾಡುತ್ತಿದ್ದು, ಇದನ್ನೂ ಸಹ ಕೋವಿಡ್ ಕಾರ್ಯಗಳಿಗೆ ನಿಡಿಲಾಗುತ್ತಿದೆ ಎಂದು ಸನ್ ನೆಟ್ವರ್ಕ್ ತಿಳಿಸಿದೆ. ಇದಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್, ಸಿಎಸ್ ಕೆ, ದೆಹಲಿ ಕ್ಯಾಪಿಟಲ್ಸ್ ಮತ್ತು ಇತರೆ ತಂಡಗಳು ಕೊರೋನಾ ವಿರುದ್ಧ ಹೋರಾಡಲು ಧನ ಸಹಾಯ ಮಾಡಿದ್ದವು, ಈಹ ಸನ್ ರೈಸರ್ಸ್ ಹೈದರಾಬಾ