ಮಾಜಿ WWE ಚಾಂಪಿಯನ್ ಗ್ರೇಟ್ ಖಾಲಿ ತಾಯಿ ವಿಧಿವಶ

ಬಹು ಅಂಗಾಗ ವೈಫಲ್ಯದಿಂದ ನಿಧನರಾದ ತಾಂದಿದೇವಿ

 | 
kali with his mother

ಲೂಧಿಯಾನ: ಮಾಜಿ WWE ಚಾಂಪಿಯನ್ ದಿ ಗ್ರೇಟ್ ಖಾಲಿ ಅವರ ತಾಯಿ ವಿಧಿವಶರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಕಾಲಿಯವರ ತಾಯಿ ತಾಂದಿದೇವಿಯವರು ಲೂಧಿಯಾನಾದ ದಯಾನಂದ ಮೆಡಿಕಲ್ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾಗಿದ್ದಾರೆ.

75 ವರ್ಷ ವಯಸ್ಸಿನ ತಾಂದಿದೇವಿಯವರು ಬಹು ಅಂಗಾಗ ವೈಫಲ್ಯದಿಂದ ನಿಧನರಾಗಿರುವುದಾಗಿ ಲೂಧಿಯಾನಾದ ದಯಾನಂದ ಮೆಡಿಕಲ್ ಆಸ್ಪತ್ರೆಯ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.

ಕಾಲಿಯವರ ತಾಯಿ ತಾಂದಿ ದೇವಿಯವರು ಎರಡು ವರ್ಷಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು, ಮೊದಲು ಅವರಿಗೆ ಜಲಂದರ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಕಳೆದ ಗುರುವಾರ ಹೆಚ್ಚಿನ ಚಿಕಿತ್ಸೆಗಾಗಿ ಲೂಧಿಯಾನಾಗೆ ಕರೆತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಅವರ ಮೃತದೇಹದ ಅಂತಿಮ ಸಂಸ್ಕಾರ ಖಾಲಿವರು ಊರಾದ ಹಿಮಾಚಲ ಪ್ರದೇಶ ಶಿರ್ಮೌರ್ ಜಿಲ್ಲೆಯ ಧಿರೈನಾ ಗ್ರಾಮದಲ್ಲಿ ನಡೆಯಲಿದೆ.