ಬೋರ್ ವೆಲ್ ಪಂಪ್ ಮಾಡಿ ನೀರು ಕುಡಿದ ಆನೆ ಮರಿ
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್
Jun 14, 2021, 16:31 IST
| 
ಮುಗ್ದ ಆನೆ ಮರಿಯೊಂದು ದಾಹ ತಣಿಸಿಕೊಳ್ಳಲು ನೀರಿಗಾಗಿ ಬೋರ್ ವೆಲ್ ಪಂಪ್ ಒತ್ತಿ ನೀರು ಕುಡಿಯುತ್ತಿದೆ. ಈ ಘಟನೆ ಪಶ್ಚಿಮ ಬಂಗಾಳದ ಜಲ್ದಾಪರ ಪ್ರದೇಶದ ಅಲಿಪುರ್ ದ್ವಾರ್ ಜಿಲ್ಲೆಯಲ್ಲಿ ನಡೆದಿದ್ದು ಇದೀಗ ಇಂಟರ್ನೆಟ್ ನೋಡುಗರನ್ನು ಆಕರ್ಷಿಸುತ್ತಿದೆ.
ಒಂಬತ್ತು ಜಲ್ದಾಪರದ ಕೇಂದ್ರ ಪಿಲ್ ಖಾನಾ ದಲ್ಲಿ ಜನಿಸಿರುವ ಕೇವಲ ಒಂಬತ್ತು ತಿಂಗಳ ಮರಿ ಆನೆ ಸ್ಥಳಿಯ ಬೋರ್ ವೆಲ್ ಬಳಿ ಕಾಣಿಸಿಕೊಂಡಿದ್ದು, ಸಾರ್ವಜನಿಕ ಸ್ಥಳಕ್ಕೆ ಆಗಮಿಸಿ ಬೋರ್ ವೆಲ್ ಒತ್ತಿ ನೀರು ಕುಡಿದಿದೆ.
ಆನೆಮರಿ ನೀರು ಕುಡಿಯುವ ದೃಶ್ಯಇಲ್ಲಿದೆ ನೋಡಿ: https://www.youtube.com/watch?v=B8jYVu2jlgI
ಆನೆ ಮರಿ ಬೋರ್ ವೆಲ್ ಪಂಪ್ ಮಾಡಿ ರು ಕುಡಿದು ತನ್ನ ದಾಹ ತಣಿಸಿಕೊಳ್ಳುವ ವೇಳೆ ಹತ್ತಿರದಲ್ಲೇ ಇದ್ದ ಸಾರ್ವಜನಿಕರು ಇದನ್ನು ಗಮನಿಸಿ ಮೊಬೈಲ್ ನಲ್ಲಿ ಆನೆ ಮರಿ ನೀರು ಕುಡಿಯುವುದನ್ನು ರೆಕಾರ್ಡ್ ಮಾಡಿದ್ದಾರೆ. ಈ ದೃಶ್ಯ ದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ.