ಮೃತ ಮಾವುತನಿಗೆ ಆನೆಯಿಂದ ಭಾವುಕ ವಿದಾಯ

ಭಾವುಕ ಆನೆಯ ಹೃದಯ ಮಿಡಿಯುವ ವಿಡಿಯೋ ಎಲ್ಲೆಡೆ ವೈರಲ್

 | 
Elephant pays tribute to its mahout

ಕೊಟ್ಟಾಯಂ: ಮೃತಪಟ್ಟ ತನ್ನ ಮಾಲೀಕ ಮಾವುತನಿಗೆ ಗಜರಾಜ ಭಾವುಕ ವಿದಾಯ ಹೇಳಿರುವ ಭಾವನಾತ್ಮಕ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದೆ. ಈ ವಿಡಿಯೋ ದೃಶ್ಯವನ್ನು ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಶ್ವಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದಾಮೋಧರ ನಾಯರ್ ಅಲಿಯಾಸ್ ಒಮನಚೆಟ್ಟನ್ ಎಂಬ ಮಾವುತ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದು, ದಾಮೋಧರ ನಾಯರ್ ಅವರು ಸಾಕಿದ್ದ ಪಲ್ಲಟ್ಟು ಬ್ರಹ್ಮದಾಥನ್ ಮೃತನ ಶರೀರಕ್ಕೆ ಆನೆ ತನ್ನ ಸೊಂಡಿಲ ಮೂಲಕ ಗೌರವಪೂರ್ಣ ವಂಧನೆ ಸಲ್ಲಿಸಿದೆ. ಆನೆಯ ಭಾವನಾತ್ಮಕ ನಮನ ಅಲ್ಲಿ ನೆರದಿದ್ದವರನ್ನು ಗದ್ಗದಿತರನ್ನಾಗಿ ಮಾಡಿದೆ.

ತನ್ನ ನೆಚ್ಚಿನ ಮಾಲೀಕನಿಗೆ ನಮನ ಸಲ್ಲಿಸಿದ ಪಲ್ಲಟ್ಟು ಬ್ರಹ್ಮದಾಥನ್ ಸೊಂಡಿಲು ಕೆಳಗಿಳಿಸಿ ಹಿಂದಕ್ಕೆ ಸರಿದು ಹೊರಟು ಹೋಗುತ್ತದೆ. ಇದನ್ನು ನೋಡಿದ ನೆಟ್ಟಿಗರು ತಮ್ಮ ತಮ್ಮ ಆಲೋಚನೆಗಳನ್ನು ಕಮೆಂಟ್ ಮಾಡಿ ಶೇರ್ ಮಾಡುತ್ತಿದ್ದಾರೆ.