ಸತ್ತ ಮಗುವನ್ನು ಹೆತ್ತುಕೊಂಡು ಜೀವಕ್ಕಾಗಿ ಅಂಗಲಾಚಿದ ತಂದೆ

ವೈದ್ಯರ ನಿರ್ಲಕ್ಷದಿಂದಲೇ ಮಗು ಸಾವು ಎಂದು ಆರೋಪ

 | 
Father with dead baby

ಬಾರಬಂಕಿ: ಜಿಲ್ಲಾ ಸರ್ಕಾರಿ ಆಸ್ಪತ್ರೆ ಎದುರು ತಂದೆಯೋರ್ವ ಐದು ತಿಂಗಳ ಮೃತ ಮಗುವನ್ನು ಹೆತ್ತುಕೊಂಡಿರುವ ಜೀವ ಉಳಿಸಲು ಅಂಗಲಾಚುತ್ತಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರಪ್ರದೇಶದ ಬಾರಬಂಕಿ ಜಿಲ್ಲೆಯಲ್ಲಿ ನಡೆದಿದೆ. ಎರಡು ಗಂಟೆಯಿಂದ ಯಾವ ವೈದ್ಯರುಗಳು ಬಂದು ಮಗುವಿಗೆ ಚಿಕಿತ್ಸೆ ನೀಡಲಿಲ್ಲ ಕೊನೆಗೆ ಮಗುವು ಪ್ರಾಣ ಕಳೆದುಕೊಂಡಿದೆ ಎಂದು ಆರೋಪಿಸಲಾಗಿದೆ.

ಈ ಮೊಬೈಲ್ ವಿಡಿಯೋವನ್ನು ನೋಡುಗರು ಚಿತ್ರಿಸಿದ್ದು, ಇದರಲ್ಲಿ ವ್ಯಕ್ತಿಯೋರ್ವ ಮಗುವನ್ನು ತೋಳಿನಲ್ಲಿ ಹಿಡಿದುಕೊಂಡು ಆಸ್ಪತ್ರೆಯ ಗೇಟ್ ಬಳಿ ಗೋಳಾಡುತ್ತಿದ್ದಾನೆ. ಈ ವಿಡಿಯೋದಲ್ಲಿ ಆತನ ಹೆಂಡಿತಿಯೂ ಇದ್ದು ದೂರದಲ್ಲಿ ಕುಳಿತಿದ್ದಾಳೆ. ಅಲ್ಲಿದವರೆಲ್ಲರೂ ಕೋವಡ್ ಬಗ್ಗೆ ಮಾತನಾಡುತ್ತಿದ್ದಾರೆ. ಕೋವಿಡ್ ಭಯದಿಂದ ರೋಗಿಗಳನ್ನು ಯಾರು ಮುಟ್ಟಲು ಬರುತ್ತಿಲ್ಲ. ಆಕೆ ಕಾಟ್ ನಿಂದ ಕೆಳಗೆ ಬಿದ್ದಳು ಅಷ್ಟೇ ಎಂದು ರೋಧಿಸುತ್ತಿರು ದೃಶ್ಯಗಳು ಸೆರೆಯಾಗಿವೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಈ ಬಗ್ಗೆ ಮಾದ್ಯಮ ವರದಿ ಬಿಡುಗಡೆ ಮಾಡಿರುವ ಬಾರಬಂಕಿ ಮುಖ್ಯ ವೈದ್ಯಾಧಿಕಾರಿ ಬಿಕೆಎಸ್ ಚೌಹಾಣ್, ಮೃತಪಟ್ಟಿದ್ದ ಮಗುವನ್ನು ಆಸ್ಪತ್ರೆಗೆ ತರಲಾಗಿತ್ತು. ಕರ್ತವ್ಯದಲ್ಲಿದ್ದ ವೈದ್ಯರು ಮಗುವನ್ನು ಪರೀಕ್ಷಿಸಿದಾಗ ಮಗುವು ಸತ್ತಿತ್ತು ಎಂದು ಹೇಳಿದ್ದಾರೆ.

ಮಗು ಟೆರೇಸ್ ಮೇಲಿಂದ ಬಿದ್ದಿದೆ ಎಂದು ಮಗುವನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ತಕ್ಷಣ ಮಗುವನ್ನು ತುರ್ತು ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿಗಳು ಮತ್ತು ಪ್ಯಾರಮೆಡಿಕಲ್ ಸಿಬ್ಬಂಧಿಗಳು ಇಬ್ಬರೂ ಪರೀಕ್ಷಿಸಿದರು ಎಂದು ಆಸ್ಪತ್ರೆಯ ವ್ಯವಸ್ಥಾಪಕರು ಹೇಳಿದ್ದಾರೆಂದು ಚೌಹಾಣ್ ತಿಳಿಸಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ ಮಗುವಿನ ತಂದೆ ಅಳುತ್ತಿದ್ದಾನೆ. ಇಲ್ಲಿಗೆ ಬಂದು ಎರಡು ಗಂಟೆಯಾಗಿದೆ. ಒಬ್ಬ ವೈದ್ಯರೂ ಬಂದಿಲ್ಲ. ಇನ್ನೊಬ್ಬರು ತಾಳ್ಮೆಯಿಂದಿರ್ರಿ ಎಂದು ಹೇಳಿದರೆ. ಮಗುವಿನ ತಂದೆ ನನ್ನ ಮಗು ಸಾಯ್ತಾ ಇದೆ ನಾನೇಗೆ ತಾಳ್ಮೆಯಿಂದರಲಿ ಎಂದು ಪ್ರಶ್ನಿಸಿದ್ದಾನೆ.

ಮೂರನೇ ವಿಡಿಯೋದಲ್ಲಿ ಹಲವು ಪೊಲೀಸರು ಆಸ್ಪತ್ರೆಯ ಗೇಟ್ ಬಳಿ ಬಂದು ಏನಯ್ಯ ನಿನ್ನ ಡ್ರಾಮ.? ನನ್ನ ಮಗಳು ಸತ್ತುಹೋಗಿದ್ದಾಳೆ ನೀಉ ಡ್ರಾಮ ಎಂದು ಹೇಳ್ತಾ ಇದ್ದೀಯ ಎಂದು ಹೇಳಿದ್ದಾನೆ. ಮತ್ತೆ ಪೊಲೀಸರು ಶಾಂತವಾಗು ಮತ್ತು ಕ್ರಮಕೈಗೊಳ್ಳಲು ಕಂಪ್ಲೈಂಟ್ ಬರೆದುಕೊಡು ಎಂದು ಹೇಳಿದ್ದಾರೆ.